#Exclusive NewsTop Newsಜಿಲ್ಲೆಸುದ್ದಿ

ತುಮಕೂರು : ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಊರು ತೊರೆದ ಕುಟುಂಬ

ತುಮಕೂರು : ತುಮಕೂರಿನಲ್ಲಿ ಮೈಕ್ರೋ ಫೈನಾನ್ಸ್‌ ಸಿಬ್ಬಂದಿ ಕಿರುಕುಳಕ್ಕೆ ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಕುರಂಕೋಟೆ ಗ್ರಾಮದಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಯ ಕಿರುಕುಳಕ್ಕೆ ಬೇಸತ್ತ ಕುಟುಂಬವೊಂದು ಊರು ತೊರೆದಿದೆ.

ಫೈವ್ ಸ್ಟಾರ್ ಫೈನಾನ್ಸ್ ನಲ್ಲಿ ಎರಡೂವರೆ ಲಕ್ಷ ಸಾಲ ಪಡೆದಿತ್ತು ಆದರೆ ಅವರು ಈಗಾಗಲೇ ಆ ಸಾಲಕ್ಕೆ ಪ್ರತಿಯಾಗಿ 4,70,000 ರೂ. ಹಣ ಪಾವತಿ ಮಾಡಿದ್ದಾರೆ ಆದರೂ ಇನ್ನೂ ಹಣ ಕಟ್ಟಬೇಕು ಎಂದು ಫೈನಾನ್ಸ್ ಕಂಪನಿಯ ಸಿಬ್ಬಂದಿ ಮನೆ ಬಳಿ ಬಂದು ಕಿರುಕುಳ ನೀಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

ಕುರಂಕೋಟೆ ಗ್ರಾಮದ ವಿನುತಾ ಮಾರುತಿ ದಂಪತಿ ಫೈವ್ ಸ್ಟಾರ್ ಫೈನಾನ್ಸ್ ಕಂಪನಿಯಲ್ಲಿ ಎರಡೂವರೆ ಲಕ್ಷ ಸಾಲ ಪಡೆದಿದ್ದರು. ಸಾಲದ ಮೊತ್ತ 2,50,000 ಹಣಕ್ಕೆ ಈಗಾಗಲೇ 4,70,000ರೂ. ಹಣವನ್ನು ದಂಪತಿ ನೀಡಿದ್ದಾರೆ. ಆದರೂ ಇನ್ನೂ ಹಣ ಕಟ್ಟಬೇಕೆಂದು ಫೈನಾನ್ಸ್ ಸಿಬ್ಬಂದಿ ಮನೆ ಬಳಿ ಬಂದು ಟಾರ್ಚರ್ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

 

Comments (0)

Your email address will not be published. Required fields are marked *

Back to top button