ರಾಮೇಶ್ವರಂ ಕೆಫೆ ಸ್ಫೋಟದ ಆರೋಪಿಗಾಗಿ ಕಳೆದ ರಾತ್ರಿ ತುಮಕೂರು ನಗರದಲ್ಲಿ ತನಿಖಾ ತಂಡ ಶೋಧ ನಡೆಸಿದೆ.
28 ಜೀಪ್ಗಳಲ್ಲಿ ಬೆಂಗಳೂರಿನಿಂದ ಬಂದಿದ್ದ ಪೊಲೀಸರು, ತುಮಕೂರು ರೈಲ್ವೇ ನಿಲ್ದಾಣ, ಕೆಎಸ್ಆರ್ಟಿಸಿ ಬಸ್ ನಿಲ್ದಾಣ, ಮಂಡಿಪೇಟೆ ಸೇರಿ ವಿವಿಧೆಡೆ ಪರಿಶೀಲನೆ ನಡೆಸಿದರು. ತನಿಖಾ ತಂಡಕ್ಕೆ ತುಮಕೂರು ಪೊಲೀಸರು ಸಾಥ್ ನೀಡಿದರು.
ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟಿಸಿದ್ದ ಬಾಂಬರ್ ತುಮಕೂರಿಗೆ ಬಂದು ಹೋಗಿರುವ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ತನಿಖಾ ತಂಡ ನಿನ್ನೆ ರಾತ್ರಿ ದಿಢೀರ್ ಎಂದು ತುಮಕೂರಲ್ಲಿ ಶೋಧ ಕಾರ್ಯ ನಡೆಸಿದೆ.
ಪ್ರಮುಖ ಸ್ಥಳಗಳ ಸಿಸಿಟಿವಿ ಕೆಮರಾಗಳನ್ನು ಕೂಡ ತನಿಖಾ ಪರಿಶೀಲಿಸಿದೆ.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.