ಶಿವಮೊಗ್ಗ: ಕೆ.ಎಸ್ ಈಶ್ವರಪ್ಪ ದೆಹಲಿಗೆ ನನ್ನ ಜೊತೆ ಬರಲಿ. ಕಾಂತೇಶ್‌ಗೆ ಟಿಕೆಟ್ ಕೊಡಿಸುವ ಪ್ರಯತ್ನ ಮಾಡುತ್ತೇನೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದರು.ಶಿವಮೊಗ್ಗದಲ್ಲಿ ಮಾತನಾಡಿದ ಬಿಎಸ್ ಯಡಿಯೂರಪ್ಪ, ನನ್ನ ಜೊತೆ ಈಶ್ವರಪ್ಪ ಬಂದರೆ ದೆಹಲಿಗೆ ಕರೆದುಕೊಂಡು ಹೋಗುತ್ತೇನೆ.ದೆಹಲಿಯಲ್ಲಿ ಅಮಿತ್ ಶಾ ಜೊತೆ ಚರ್ಚಿಸೋಣ, ನನ್ನ ಜೊತ ಈಶ್ವರಪ್ಪ ಬರಲಿ. ಕಾಂತೇಶ್‌ಗೆ ಟಿಕೆಟ್ ಕೊಡಿಸುವ ಪ್ರಯತ್ನ ಮಾಡುತ್ತೇನೆ.
ನಾನು ಬೇರೆ ಅಲ್ಲ, ಈಶ್ವರಪ್ಪ ಬೇರೆ ಅಲ್ಲ. ನಾನೇ ಖುದ್ದಾಗಿ ಅವರ ಜೊತೆ ನಿಲ್ಲುತ್ತೇನೆ. ನಿನ್ನೆ ಅವರ ಮನೆಗೆ ಪ್ರಹ್ಲಾದ್ ಜೋಶಿಯನ್ನ ಕಳುಹಿಸಿದ್ದೆ ಎಂದು ಬಿಎಸ್‌ವೈ ಹೇಳಿದರು