Top Newsರಾಜಕೀಯ

ಜೈಲಿಂದಲೇ ದೆಹಲಿ ಸಿಎಂ ಕೇಜ್ರಿವಾಲ್ ಆಡಳಿತ!

ದೆಹಲಿ ಅಬಕಾರಿ ಹಗರಣ ಸಂಬಂಧ ಅರೆಸ್ಟ್ ಆಗಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಜೈಲಿನಿಂದಲೇ ಆಡಳಿತ ನಡೆಸುವ ಸಂಭವ ಇದೆ. ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ಅರವಿಂದ್ ಕೇಜ್ರಿವಾಲ್ ರಾಜೀನಾಮೆ ನೀಡಲ್ಲ ಎಂದು ಆಪ್ ಮೂಲಗಳು ತಿಳಿಸಿವೆ.

ಅರವಿಂದ್ ಕೇಜ್ರಿವಾಲ್ ಬಂಧನದ ನಂತರ ಮಾತನಾಡಿದ ಸಚಿವೆ ಅತಿಶಿ ಭಾರದ್ವಾಜ್, ಕೇಜ್ರಿವಾಲ್ ಆರೆಸ್ಟ್ ಆಗಿದ್ದರೂ ದೆಹಲಿ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ. ಅಗತ್ಯಬಿದ್ದರೇ ಜೈಲಿನಿಂದಲೇ ಆಡಳಿತ ನಡೆಸಲಿದ್ದಾರೆ ಎಂದು ಪ್ರಕಟಿಸಿದ್ದಾರೆ.

ಕೇಜ್ರಿವಾಲ್​ ಅವರನ್ನು ನೋಡಿ ನರೇಂದ್ರ ಮೋದಿ ಭಯ ಬಿದ್ದಿದ್ದಾರೆ. ಅದಕ್ಕೆ ಲೋಕಸಭೆ ಚುನಾವಣೆಗೆ ಮುನ್ನ ಅಕ್ರಮವಾಗಿ ಬಂಧಿಸಿ ಜೈಲಿಗೆ ಕಳಿಸುವ ಷಡ್ಯಂತ್ರ್ಯ ಮಾಡಿದ್ದಾರೆ ಎಂದು ಅತಿಷಿ ಭಾರದ್ವಾಜ್ ಆರೋಪ ಮಾಡಿದ್ದಾರೆ.

ಚುನಾವಣೆ ಸಂದರ್ಭದಲ್ಲಿಯೇ ಅರವಿಂದ್ ಕೇಜ್ರಿವಾಲ್ ಬಂಧಿಸಿರುವುದರ ಹಿಂದೆ ದೊಡ್ಡ ರಾಜಕೀಯ ಕುತಂತ್ರವೇ ಅಡಗಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಸಭೆ ಸದಸ್ಯ ರಾಘವ್ ಚಡ್ಡಾ ವ್ಯಾಖ್ಯಾನಿಸಿದ್ದಾರೆ.

 ಇದನ್ನು ಓದಿ

https://freedomtvlive.com/2024/03/22/aravind-kejriwal-arrested/

 

Comments (0)

Your email address will not be published. Required fields are marked *

Back to top button