ಜಿಲ್ಲೆ

ಜನ ಸಂಕಷ್ಟದಲ್ಲಿರುವಾಗ ಮಂತ್ರಿಗಳು ಮೋಜು ಮಸ್ತಿ ಮಾಡೋದು ಸರಿಯಲ್ಲ : ಆರ್​ ಅಶೋಕ್​

ಬೆಳಗಾವಿ : ರಾಜ್ಯದಲ್ಲಿ ಬರಗಾಲದ ಬಗ್ಗೆ ಹಾಗೂ ಸಂಕಷ್ಟದಲ್ಲಿರುವ ರೈತರಿಗೆ ಸಾಂತ್ವನ ಹೇಳಲು ತೆರಳಬೇಕಿತ್ತು ಆದ್ರೆ ಮಂತ್ರಿಗಳೆಲ್ಲ ತೆಲಂಗಾಣಕ್ಕೆ ಹೋಗಿ ಅಲ್ಲಿನ ಎಂಎಲ್ ಎಗಳ ಸೇವೆ ಮಾಡ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್​.ಅಶೋಕ್​ ವಾಗ್ದಾಳಿ ನಡೆಸಿದರು.

ಬೆಳಗಾವಿಯ ಚಳಿಗಾಲ ಅಧಿವೇಶನಕ್ಕೆ ಬಂದು ಸರ್ಕಾರ ಏನು ಮಾಡಿದೆ ಅಂತ‌ ಹೇಳಬೇಕಿತ್ತು. ಆದರೆ ಯಾವ ಮಂತ್ರಿಗಳೂ ಸಹ ಸದನಕ್ಕೆ ಬರುತ್ತಿಲ್ಲ. ಎಲ್ಲ ರಾಜ್ಯಗಳಲ್ಲೂ ಸೋತಿದ್ದಾರೆ. ತೆಲಂಗಾಣ ಒಂದೇ ರಾಜ್ಯದಲ್ಲಿ ಗೆದ್ದಿದ್ದಾರೆ, ಆದ್ದರಿಂದ ಎಲ್ಲರೂ ತೆಲಂಗಾಣದಲ್ಲಿ ಕೂತಿದ್ದಾರೆ. ಮಾರ್ಯಾದೆ ಇಲ್ಲಿ ಹೋಗುತ್ತೆ ಅಂತ ಅಲ್ಲಿಗೆ ಹೋಗಿ ಕೂತಿದ್ದಾರೆ ಎಂದರು. ಕರ್ನಾಟಕದ ಜನ ಇಲ್ಲಿ‌ ಸಂಕಷ್ಟದಲ್ಲಿರುವಾಗ ಮೋಜು ಮಸ್ತಿ ಮಾಡೋದು ಸರಿಯಲ್ಲ. ಇದು ನಾಚಿಗೇಡಿತನ. ಕೂಡಲೇ ಅವರೆಲ್ಲರನ್ನೂ ವಾಪಾಸ್ ಕರೆಸಬೇಕು. ಸಿಎಂ ಅವರು ಮಂತ್ರಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಆರ್​. ಅಶೋಕ್​ ಹೇಳಿದರು.

Comments (0)

Your email address will not be published. Required fields are marked *

Back to top button