ಕಲಬುರಗಿ : ಬಸ್ ಸ್ಟಾಪ್ ನಿಲ್ದಾಣದಲ್ಲಿದ್ದ ಅಪರಿಚಿತ ಬ್ಯಾಗ್ ಒಂದು ಆತಂಕ ಸೃಷ್ಠಿಸಿದ ಘಟನೆ ಕಲಬುರಗಿಯಲ್ಲಿ ಜರುಗಿದೆ. ಕಲಬುರಗಿಯ ಜಿಲ್ಲಾಧಿಕಾರಿ ಕಚೇರಿ ಬಳಿ ಇರೋ ಬಸ್ ಸ್ಟಾಪ್ ನಲ್ಲಿ ಈ ಬ್ಯಾಗ್ ಪತ್ತೆಯಾಗಿದ್ದು, ಬ್ಯಾಗ್ ನೋಡುತ್ತಲೇ ಜನರು ಭಯಭೀತರಾಗಿದ್ದಾರೆ. ಆತಂಕಗೊಂಡು ಕೂಡಲೇ, ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದಾರೆ. ಕೂಡಲೇ ಬಾಂಬ್ ಸ್ಕ್ವಾಡ್ ಸ್ಥಳಕ್ಕೆ ಧಾವಿಸಿದ್ದು, ಬಸ್ ಸ್ಟಾಪ್ ನಲ್ಲಿದ್ದ ಬ್ಯಾಗ್ ತಪಾಸಣೆ ಮಾಡಿದೆ. ಆದರೆ, ತಪಾಸಣೆ ವೇಳೆ ಯಾವುದೇ ಸ್ಪೋಟಕ ವಸ್ತು ಪತ್ತೆಯಾಗಿಲ್ಲ. ಇದರಿಂದಾಗಿ ಕಲಬುರಗಿ ನಗರದ ಜನತೆ.. ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.ಸದ್ಯ ಬಾಂಬ್ ಸ್ಕ್ವಾಡ್ ಬ್ಯಾಗ್ನ್ನು ಖಾಕಿ ವಶಕ್ಕೆ ನೀಡಿದ್ದು, ಈ ಬಗ್ಗೆ ಪೊಲೀಸರು ಪ್ರಕರಣ ವಿಚಾರಣೆ ನಡೆಸಿದ್ದಾರೆ.
ಜನರಲ್ಲಿ ಆತಂಕ ಸೃಷ್ಠಿಸಿದ ಅಪರಿಚಿತ ಬ್ಯಾಗ್…
RELATED ARTICLES


