Wednesday, January 28, 2026
18.8 C
Bengaluru
Google search engine
LIVE
ಮನೆಆರೋಗ್ಯಚೀನಾದಲ್ಲಿ ನ್ಯುಮೋನಿಯಾ ವೈರಸ್ ರುದ್ರ ತಾಂಡವ: ಚಾಮರಾಜನಗರದಲ್ಲಿ ಹೈ ಅಲರ್ಟ್

ಚೀನಾದಲ್ಲಿ ನ್ಯುಮೋನಿಯಾ ವೈರಸ್ ರುದ್ರ ತಾಂಡವ: ಚಾಮರಾಜನಗರದಲ್ಲಿ ಹೈ ಅಲರ್ಟ್

ಚಾಮರಾಜನಗರ : ಚೀನಾದಲ್ಲಿ ನ್ಯುಮೋನಿಯಾ ವೈರಸ್ ರುದ್ರ ತಾಂಡವವಾಡುತ್ತಿದೆ. ಈ ಹಿನ್ನಲೆ ಮಾತನಾಡಿದ ಉಸ್ತುವಾರಿ ಸಚಿವ ಕೆ.ವೆಂಕಟೇಶ್, ಚಾಮರಾಜನಗರದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ, ಚಾಮರಾಜನಗರದ ಎರಡು ಚೆಕ್​ಪೋಸ್ಟ್​ಗಳಲ್ಲಿ ಮುಂಜಾಗ್ರತಾ ಕ್ರಮಕ್ಕೆ ಚಿಂತನೆ ನಡೆಸಿದೆ. ಇನ್ನು ಆರೋಗ್ಯ ಇಲಾಖೆ ಇಡೀ ರಾಜ್ಯದಲ್ಲಿ ಕ್ರಮ ವಹಿಸಿದೆ. ನ್ಯುಮೋನಿಯಾ ರೋಗದ ಎಚ್ಚರಿಕೆ ವಹಿಸುವಂತೆ ಸೂಚನೆ ಕೊಟ್ಟಿದ್ದಾರೆ. ನಮ್ಮ ಜಿಲ್ಲೆಯಲ್ಲಿ ಯಾವುದೇ ಪ್ರಕರಣ ವರದಿಯಾಗಿಲ್ಲ. ಜಿಲ್ಲಾಡಳಿತದಿಂದ ಈಗಾಗಲೇ ಎಚ್ಚರಿಕೆ ವಹಿಸಲಾಗಿದೆ. ಬೆಡ್ ಸಿದ್ದಪಡಿಸಿಕೊಳ್ಳುವಂತೆ ಆರೋಗ್ಯ ಇಲಾಖೆಗೆ ಸೂಚನೆ ಕೊಟ್ಟಿದ್ದೇನೆ. ಮುಂದಿನ ದಿನಗಳಲ್ಲಿ ಗಡಿಯಲ್ಲೂ ಕೂಡ ರ್ಯಾಂಡಮ್​ ಚೆಕ್ಅಫ್​ ಮಾಡಲಾಗುತ್ತದೆ ಎಂದು ಹೇಳಿದರು.


ಇನ್ನು ಚೀನಾದಲ್ಲಿ ಹೊಸ ಮಾದರಿ ಸೋಂಕು ಪತ್ತೆಯಾದ ಕೂಡಲೇ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ ಮಾಡಿತ್ತು. ಈ ಸೋಂಕು ಕಡಿಮೆ ತೀವ್ರತೆ ಹೊಂದಿದ್ದು, 5 ರಿಂದ 7 ದಿನ ದೇಹದಲ್ಲಿರುತ್ತದೆ. ಜೊತೆಗೆ ಆರೋಗ್ಯ ಇಲಾಖೆ ಗೈಡ್ ಲೈನ್ಸ್ ಹೊರಡಿಸಿದೆ

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments