ಬಳ್ಳಾರಿ; ಹೊಲದಲ್ಲಿ ಮೇಯುತ್ತಿದ್ದ ಕುರಿಗಳ ಮೇಲೆ ಇದ್ದಕಿದ್ದಂತೆ ಚಿರತೆ ದಾಳಿ ಮಾಡಿ 21 ಕುರಿಗಳನ್ನು ಬಲಿ ಪಡೆದುಕೊಂಡಿದೆ. ಘಟನೆ ಬಳ್ಳಾರಿ ತಾಲೂಕಿನ ಸಂಜೀವರಾಯನಕೋಟೆ ಗ್ರಾಮದ ಬಳಿ ನಡೆದಿದೆ.
ತಡ ರಾತ್ರಿ ಚಿರತೆಯೊಂದು ಹೊಲಕ್ಕೆ ನುಗ್ಗಿದ್ದು ಹಟ್ಟಿಹಾಕಿದ್ದ 21 ಕುರಿಗಳನ್ನ ಸಾಯಿಸಿ, 2 ಕುರಿ ಹೊತ್ತೊಯ್ದಿದೆ. ರೈತ ತಿಮ್ಮಪ್ಪ ಎಂಬುವವರ 21 ಕುರಿಗಳು ಮೃತಪಟ್ಟಿವೆ. ಕುರಿ ಕಳೆದಕೊಂಡ ಕಂಗಾಲಾಗಿದ್ದಾನೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು, ಪಶುವೈದ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.