ಜಿಲ್ಲೆ

ಗುರುಭವನ ನಿರ್ಮಾಣ ಮಾಡುವ ಪುಣ್ಯ ನನಗೆ ಸಿಕ್ಕಿದೆ : ವಿ. ಸೋಮಣ್ಣ

ತುಮಕೂರು  : ಸಿದ್ದಗಂಗಾ ಮಠದಲ್ಲಿ ಗುರುಭವನ ಲೋಕಾರ್ಪಣೆ ಕಾರ್ಯಕ್ರಮ ಹಿನ್ನಲೆ ಸಿದ್ದಗಂಗಾ ಮಠಕ್ಕೆ ಮಾಜಿ ಸಚಿವ ವಿ.ಸೋಮಣ್ಣ ಆಗಮಿಸಿದ್ದರು. ವಿ. ಸೋಮಣ್ಣ ಪ್ರತಿಷ್ಠಾನದಿಂದ ನಿರ್ಮಾಣಗೊಂಡಿರುವ ಗುರುಭವನ ಕಟ್ಟಡವಾಗಿದೆ. ಶಿವೈಕ್ಯ ಶಿಮಕುಮಾರ್​​ ಶ್ರೀಗಳ ಗದ್ದಿಗೆಗೆ ವಿ. ಸೋಮಣ್ಣ, ಅವರ ಪತ್ನಿ ಶೈಲಜಾ ಸೋಮಣ್ಣ, ಪುತ್ರ ಅರುಣ್​ ಸೋಮಣ್ಣ ಪೂಜೆ ಸಲ್ಲಿಸಿದ್ದರು.

ಸಿದ್ದಗಂಗಾ ಮಠದಲ್ಲಿ ಗುರುಭವನ ನಿರ್ಮಾಣ ಕುರಿತು ಮಾತನಾಡಿದ ಅವರು, ಸಿದ್ದಗಂಗಾ ಮಠದಲ್ಲಿ ಗುರುಭವನ ನಿರ್ಮಾಣ ಮಾಡುವ ಪುಣ್ಯ ನನಗೆ ಸಿಕ್ಕಿದೆ. ಶ್ರೀ ಶಿವಕುಮಾರ ಶ್ರೀಗಳ ಆಶೀರ್ವಾದದಿಂದ ಈ ಒಳ್ಳೆ ಕೆಲಸ ನಡೀತಿದೆ ಎಂದರು. ಈ ಕಾರ್ಯಕ್ರಮಕ್ಕೆ ಗೃಹ ಸಚಿವ ಜಿ.ಪರಮೇಶ್ವರ್, ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಕೂಡ ಬರುತ್ತಾರೆ. ಈ ಸ್ಥಳದಲ್ಲಿ ಯಾವುದೇ ರಾಜಕೀಯ ವಿಚಾರ ಮಾತಾಡೋದಿಲ್ಲ ಹಾಗೂ  ಕಾರ್ಯಕ್ರಮಕ್ಕೆ ರಾಜಕೀಯ ಲೇಪ ಮಾಡೋದು ಸರಿಯಲ್ಲ ಎಂದು ಹೇಳಿದರು. ಡಿ.6 ರ ನಂತರ ಕೆಲ ವಿಚಾರ ಹೇಳುತ್ತೇನೆ ಎಂದಿದ್ದೇನೆ. ಈ ಕಾರ್ಯಕ್ರಮ ಮುಗಿದ‌ ಬಳಿಕ ರಾಜಕೀಯ ಮಾತನಾಡುತ್ತೇನೆ. ರಾಜಕೀಯಕ್ಕೂ ಗುರುಭವನ ಲೋಕಾರ್ಪಣೆ ಕಾರ್ಯಕ್ರಮಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಸಚಿವ ವಿ. ಸೋಮಣ್ಣ ತಿಳಿಸಿದರು.

Comments (0)

Your email address will not be published. Required fields are marked *

Back to top button