Wednesday, April 30, 2025
24.6 C
Bengaluru
LIVE
ಮನೆUncategorizedಗಣಿನಾಡು ಬಳ್ಳಾರಿಗೆ ರಾಮೇಶ್ವರ ಕೆಫೆ ಬ್ಲಾಸ್ಟ್ ನಂಟು..?

ಗಣಿನಾಡು ಬಳ್ಳಾರಿಗೆ ರಾಮೇಶ್ವರ ಕೆಫೆ ಬ್ಲಾಸ್ಟ್ ನಂಟು..?

ಬಳ್ಳಾರಿ,: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಬ್ಲಾಸ್ಟ್ ಗೂ ಗಣಿನಾಡು ಬಳ್ಳಾರಿಗೂ ನಂಟು ಇರುವುದು ಎನ್ ಐಎ ಪರಿಶೀಲನೆಯಿಂದ ತಿಳಿದು ಬಂದಿದೆ. ಕಳೆದ ಡಿಸೆಂಬರ್ ನಲ್ಲಿ ಎನ್ ಐ ಎ ತಂಡವು ದಾಳಿ ನಡೆಸಿ ಭಯೋತ್ಪಾದನೆಯ ಮಾಸ್ಟರ್ ಮೈಂಡ್ ಮಿನಾಜ್ ಜೊತೆ ನೇರ ಸಂಪರ್ಕ ಹೊಂದಿದ್ದ ಸೈಯದ್ ಸಮೀರ್ ನನ್ನು ಬಂಧಿಸುವ ಕಾರ್ಯ ಮಾಡಿತ್ತು. ಈಗ ಇದೆ ಸಮೀರ್ ಮತ್ತು ಬೆಂಗಳೂರು ಬಾಂಬ್ ಬ್ಲಾಸ್ಟ್ ರ್ ಗೂ ಸಂಬಂಧವಿರುವುದು ಧೃಡ ಪಟ್ಟಿದೆ. ಹೌದು.
ಬೆಂಗಳೂರು ಬಾಂಬ್ ಬ್ಲಾಸ್ಟರ್ ಗೂ ಗಣಿನಾಡು ಬಳ್ಳಾರಿಗೂ ನಂಟು‌ ಇರುವುದು ದೃಢವಾಗಿದೆ. ತುಮಕೂರಿನ ಮೂಲಕ ನೇರವಾಗಿ ಬಳ್ಳಾರಿಗೆ ರಾಮೇಶ್ವರಂ ಕೆಫೆ ಶಂಕಿತ ಬ್ಲಾಸ್ಟರ್ ಬಂದಿದ್ದ ಎನ್ನಲಾಗಿದೆ.
ಡಿಸೆಂಬರ್ ನಲ್ಲಿ ಎನ್ ಐಎ ತಂಡದಿದಂದ ಸೈಯದ್ ಸಮೀರ್ ಬಂಧನವಾಗಿತ್ತು.ಭಯೋತ್ಪಾದನೆಯ ಮಾಸ್ಟರ್ ಮೈಂಡ್ ಮೀನಾಜ್ ಜೊತೆ ಸಮೀರ ನೇರ ಸಂಪರ್ಕ ಹೊಂದಿರುವುದು ತಿಳಿದಿದೆ.ಸಮೀರ್ ಮತ್ತು ರಾಮೇಶ್ವರಂ ಕೆಫೆ ಬ್ಲಾಸ್ಟರ್ಗೂ ನೇರ ಸಂಬಂಧ ಇರುವುದು ಧೃಡವಾಗಿದೆ. ಕಳೆದ ಕೆಲ ದಿನಗಳ ಹಿಂದೆ ರಾಜ್ಯ ರಾಜಧಾನಿ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಆಗುವ ಮೂಲಕ ಸಮಸ್ತ ಕನ್ನಡಿಗರನ್ನು ಭಯೋತ್ಪಾದಕ ಭಯಭೀತರನ್ನಾಗಿಸಿದ್ದ. ಕೃತ್ಯ ಎಸಗಿದ ನಂತರ ಯಾವುದೇ ಸುಳ್ಳಿವು ಸಿಗದಂತೆ, ಬಾಂಬ್ ಬ್ಲಾಸ್ಟರ್ ಎಚ್ಚರವಹಿಸಿದ್ದ. ಬೆಂಗಳೂರಿನಿಂದ ತುಮಕೂರು, ಅಲ್ಲಿಂದ ಬಳ್ಳಾರಿ ಕಡೆ ಈತ ಪ್ರಯಾಣಿಸಿರುವುದು, ಇಲ್ಲಿಂದ ಬೇರೆ ಕಡೆ ಪ್ರಯಾಣಿಸಿರುವ ವಿಷಯ ಎನ್ ಐಎ ತಂಡದ ಪರಿಶೀಲನೆಯಿಂದ ತಿಳಿದು ಬಂದಿದೆ. ಶಂಕಿತ ಭಯೋತ್ಪಾದಕನ ಜಾಡು ಹಿಡಿದು ಪರಿಶೀಲನೆ ಮಾಡಲಾಗ್ತಿದೆ.‌ಇದಕ್ಕಾಗಿ ನಿನ್ನೆ ಮುಂಜಾನೆ ಬೆಳ್ಳಂ ಬೆಳ್ಳಿಗೆ ಎರಡು ಕಾರ್ ಗಳಲ್ಲಿ ಬಳ್ಳಾರಿಗೆ ಎನ್ ಐಎ ತಂಡ ಬಂದಿದೆ. ಬಳ್ಳಾರಿಯ ನೂತನ ಬಸ್ಸ್ಟ್ಯಾಂಡ್ ನಲ್ಲಿರುವ ಎಲ್ಲಾ ಸಿಸಿ ಕ್ಯಾಮರಗಳನ್ನು ಪರಿಶೀಲಿಸುವ ಕಾರ್ಯ ಮಾಡಲಾಗಿದೆ. ಬಾಂಬ್ ಬ್ಲಾಸ್ಟರ್ ಬಸ್ ಸ್ಟ್ಯಾಂಡ್ ನಲ್ಲಿ ಇಳಿದು ಬಳ್ಳಾರಿ ನಗರದ ಕೆಲ ಭಾಗಗಳಲ್ಲಿ ಸಂಚರಿಸಿ, ನಂತರ ಶಿವಮೊಗ್ಗ ಮೂಲಕ ಭಟ್ಕಳ ಪ್ರಯಾಣಿಸಿರುವುದು ಎನ್ ಐಎ ತಂಡದ ತನಿಖೆಯಿಂದ ತಿಳಿದು ಬಂದಿದೆ. ಈ ಹಿಂದೆ ಡಿಸೆಂಬರ್ ತಿಂಗಳಲ್ಲಿ ಸೈಯದ್ ಸಮೀರ್ ಗೂ ಶಂಕಿತ ಬ್ಲಾಸ್ಟರ್ ಗೂ ಸಂಬಂಧ ಇರುವುದು ಎನ್ ಐ ಎ ತಂಡದ ತನಿಖೆಯಿಂದ ಧೃಡ ಪಟ್ಟಿದೆ.
ಗಣಿನಾಡು ಬಳ್ಳಾರಿಯು, ಹಲವಾರು ವಿಷಯಗಳಲ್ಲಿ ಪ್ರಸಿದ್ದಿಯಾಗಿದೆ. ಅಲ್ಲದೇ ಇಲ್ಲಿಯ ಹಿಂದು ಮುಸ್ಲಿಮರು ಸಾಮರಸ್ಯದ ಜೀವನ ನಡೆಸುತ್ತಿದ್ದಾರೆ. ಆದರೆ ಇತೀಚೀನ ಸೈಯದ್ ಸಮೀರ್ ಬಳ್ಳಾರಿಯಲ್ಲಿ ಬಂಧನವಾದ ದಿನದಿಂದ ಆಗುತ್ತಿರುವ ಬೆಳವಣಿಗೆಯನ್ನು ಗಮನಿಸಿದರೆ ಬಳ್ಳಾರಿಗೂ ಬಾಂಬ್ ಬ್ಲಾಸ್ಟ್ ಘಟನೆಗೂ ನಂಟು ಇರುವುದು ಧೃಡ ಪಟ್ಟಿದೆ.ಈ ಎಲ್ಲಾ ಬೆಳವಣಿಗೆಯಿಂದ ಬಳ್ಳಾರಿಯಲ್ಲಿ ಭಯದ ವಾತಾವರಣ ಮನೆಮಾಡಿದೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments