Saturday, September 13, 2025
21.9 C
Bengaluru
Google search engine
LIVE
ಮನೆಜಿಲ್ಲೆಖರ್ಗೆ ಬಗ್ಗೆ ಮಾತನಾಡೋಕೆ ಛಲವಾದಿಗೆ ನೈತಿಕತೆ ಇಲ್ಲ : ಸಚಿವ ಎನ್​.ಎಸ್​.ಬೋಸರಾಜು

ಖರ್ಗೆ ಬಗ್ಗೆ ಮಾತನಾಡೋಕೆ ಛಲವಾದಿಗೆ ನೈತಿಕತೆ ಇಲ್ಲ : ಸಚಿವ ಎನ್​.ಎಸ್​.ಬೋಸರಾಜು

ಕಲಬುರಗಿ : ಖರ್ಗೆ ಬಗ್ಗೆ ಮಾತನಾಡೋಕೆ ಛಲವಾದಿ ನಾರಾಯಣಸ್ವಾಮಿಗೆ ಯಾವ ನೈತಿಕತೆ ಇದೆ.ಖರ್ಗೆ ಗರಡಿಯಲ್ಲೆ ಬೆಳೆದ ಛಲವಾದಿ ಇಂದು ಅವರ ಬಗ್ಗೆನೆ ಮಾತಾಡ್ತಾಯಿದ್ದಾರೆ ಎಂದು ಕಲಬುರಗಿಯಲ್ಲಿ ಛಲವಾದಿ ನಾರಾಯಣಸ್ವಾಮಿ ವಿರುದ್ದ ಹರಿಹಾಯ್ದ ಸಚಿವ ಎನ್​.ಎಸ್​.ಬೋಸರಾಜು.

ಬಿಜೆಪಿಯವರಿಗೆ ಮಾಡೋಕೆ ಬೇರೆನು ಕೆಲಸವಿಲ್ಲ,ಅದಕ್ಕೆ ಪ್ರತಿಭಟನೆ ಮಾಡ್ತಿದಾರೆ.ಬಿಜೆಪಿಗರಿಗೆ ಜನರ ಕೆಲಸ ಆಗೋದು ಬೇಕಿಲ್ಲ, ರಾಜ್ಯದ ಅಭಿವೃದ್ಧಿ ಆಗೋದಂತು ಬೇಕೆ ಇಲ್ಲ. ಕೊಟ್ಟ ಮಾತಿನಂತೆ ಪ್ರಣಾಳಿಕೆಯಲ್ಲಿನ‌ ಎಲ್ಲಾ ಭರವಸೆಗಳನ್ನು ಈಡೇರಿಸಿದ್ದೇವೆ.ಬಿಜೆಪಿ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ, ದ್ವೇಷ ಭಾಷಣ ಮಾಡುತ್ತಿದೆ.ಸರ್ಕಾರ ತಪ್ಪು ಮಾಡ್ತಿದೆ ಅಂತಾ ಒಂದಾದರೂ ತಪ್ಪು ಬಿಜೆಪಿ ತೋರಿಸಿದೆಯಾ..? ಅದು ಬಿಟ್ಟು ಬಾಯಿಗೆ ಬಂದ ಹಾಗೇ ಬೋಗುಳ್ತಿದ್ದಾರೆ, ನಮಗೂ ಬೋಗುಳೋಕೆ ಬರುತ್ತೆ ಎಂದು ಆಕ್ರೋಶ ಹೊರಹಾಕಿದ ಸಚಿವ ಬೋಸರಾಜು.

ಇಂದಿರಾಗಾಂಧಿ, ರಾಜೀವಗಾಂಧಿ ದೇಶದ ಐಕ್ಯತೆಗಾಗಿ ತಮ್ಮ ಪ್ರಾಣ ಬಲಿದಾನ ಮಾಡಿದ್ರು,ಇಂತಹ ಕುಟುಂಬದ ಬಗ್ಗೆ ಮಾತಾನಾಡೋ ಬಿಜೆಪಿಯ ಒಬ್ಬನಾದರೂ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ರಾ..? ಕೇಂದ್ರ ಸರ್ಕಾರ ನಿರಂತರವಾಗಿ ಅನ್ಯಾಯ ಮಾಡ್ತಾ ಬರ್ತಿದೆ.ಆದರೂ ಸಹಿಸಿಕೊಂಡಿದ್ದೇವೆ.

ಬಿಜೆಪಿಯಲ್ಲಿ ನಾಲ್ಕು ಬಾಗಿಲುಗಳಾಗಿವೆ.ಅವರನ್ನ, ಅವರ ಪಕ್ಷವನ್ನ, ಅವರ ಪಕ್ಷದವರೇ ಸೋಲಿಸುತ್ತಾರೆ.ಬಿಜೆಪಿಯವರು ಬೊಗಳೋದನ್ನ ಬಿಟ್ಟು ಕೇಂದ್ರದಿಂದ ಅನುದಾನ ತರಲಿ ಎಂದು ಬಿಜೆಪಿ ವಿರುದ್ಧ ಹರಿಹಾಯ್ದ ಸಚಿವ ಎನ್​ ಎಸ್​ ಭೋಸರಾಜು..

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments