ದೆಹಲಿ: ಆಂಧ್ರದಲ್ಲಿ ಬಿಜೆಪಿ , ತೆಲುಗು ದೇಶಂ ಪಕ್ಷ ಹಾಗೂ ಜನಸೇನಾ ಪಕ್ಷಗಳು ದ್ವೇಷ ಮರೆತು ಜಂಟಿಯಾಗಿ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲಿವೆ ಎಂಬುದಾಗಿ ಈ ಪಕ್ಷಗಳ ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ದೇಶದ ಅಭಿವೃದ್ದಿಗಾಗಿ ಕಳೆದ 10 ವರ್ಷಗಳಿಂದ ದುಡಿಯುತ್ತಿದ್ದಾರೆ. ಆಂಧ್ರಪ್ರದೇಶದ ಜನರ ಕಲ್ಯಾಣದ ದೃಷ್ಠಿಯಿಂದ ಬಿಜೆಪಿ ಜೊತೆಗೂಡಿ ಈ ಬಾರಿ ಆಂಧ್ರಪ್ರದೇಶದಲ್ಲಿ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜೊತೆಗೂಡಿ ಚುನಾವಣೆ ಎದುರಿಸಲು ಸಿದ್ದರಾಗಿದ್ದಾಗಿ ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ. ಕಳೆದ 1996 ಹಾಗೂ 2014ರಲ್ಲಿ ತೆಲುಗು ದೇಶಂ ಈಗಾಗಲೇ ಬಿಜೆಪಿ ಜೊತೆಗೂಡಿ ಸ್ಪರ್ಧಿಸಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಹೊಂದಾಣಿಕೆ ಮುರಿದು ಬಿದ್ದಿತ್ತು. ಜನಸೇನಾ ಕಳೆದ ಚುನಾವಣೆಗಳಲ್ಲಿ ಬಿಜೆಪಿಗೆ ಬಾಹ್ಯವಾಗಿ ಬೆಂಬಲಿಸಿತ್ತು. ಆದರೆ, ಈ ಬಾರಿ ಟಿಡಿಪಿ ಜೊತೆ ಜನಸೇನಾ ಸಹ ಬಿಜೆಪಿ ಜೊತೆಗೂಡಿ ಚುನಾವಣೆ ಎದುರಿಸಲು ನಿರ್ಧರಿಸಿದೆ. ಸೀಟು ಹೊಂದಾಣಿಕೆ ಬಗ್ಗೆ ಮಾತುಕತೆ ನಡೆಸಿ, ಇನ್ನೂ ಒಂದು- ಎರಡು ದಿನಗಳಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ . ನಂತರದಲ್ಲಿ ಈ ಪಕ್ಷಗಳ ಮದ್ಯ ಸೀಟು ಹಂಚಿಕೆ ಪೂರ್ಣವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕೊನೆಗೂ ಟಿಡಿಪಿ ಜೊತೆ ಮೈತ್ರಿಗೆ ಜೈ ಎಂದ ಬಿಜೆಪಿ….
RELATED ARTICLES