ಮನರಂಜನೆಸಿನಿಮಾ

‘ಕಾಂತಾರ ಚಾಪ್ಟರ್​​ 1’ ಫಸ್ಟ್​ಲುಕ್​ ಟೀಸರ್​​ ದಾಖಲೆ ; 24 ಗಂಟೆಯಲ್ಲಿ ಆದ ವೀವ್ಸ್​ ಎಷ್ಟು?

ಕಾಂತಾರ ಸಿನಿಮಾ ಸೂಪರ್​ ಹಿಟ್​ ಆಗಿತ್ತು. ಇದೇ ಕಾರಣದಿಂದ ‘ಕಾಂತಾರ’ ಪ್ರಿಕ್ವೆಲ್​ ಮೇಲೆ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆ ಇದೆ. ನವೆಂಬರ್​ 21 ರಂದು ರಿಲೀಸ್​ ಆದ ಕಾಂತಾರ ಚಾಪ್ಟರ್​​ 1 ಫಸ್ಟ್​ ಲುಕ್​ ಟೀಸರ್​ ಕಂಡ ವೀಕ್ಷಣೆಯೇ ಇದಕ್ಕೆ ಸಾಕ್ಷಿ. ಏಳು ಭಾಷೆಗಳಲ್ಲಿ ರಿಲೀಸ್​ ಆಗಿರುವ ಈ ಟೀಸರ್​ ಬರೋಬ್ಬರಿ 12 ಮಿಲಿಯನ್ ಅಂದರೆ 1.2 ಕೋಟಿ ವೀಕ್ಷಣೆ ಕಂಡಿದೆ. ಈ ಮೂಲಕ ಹಲವು ದಾಖಲೆಯನ್ನು ಸರಿಗಟ್ಟಿದೆ.

ಕಳೆದ ವರ್ಷ ಕಾಂತಾರ ಸಿನಿಮಾ ರಿಲೀಸ್​ ಆಗಿ ಹಿಟ್​​ ಆಗಿತ್ತು. ಇದಾದ ಬಳಿಕ ಕಾಂತಾರ ಪಾರ್ಟ್​ 2 ಸಿನಿಮಾ ಮಾಡಲು ರಿಷಬ್ ಶೆಟ್ಟಿ ಮುಂದಾಗಿದ್ದಾರೆ. ಸ್ಕ್ರೀಪ್ಟ್​ಗಾಗಿ ಸಾಕಷ್ಟು ಶ್ರಮ ವಹಿಸಿ, ಶ್ರದ್ಧೆಯಿಂದ ಸ್ಕ್ರೀಪ್ಟ್​ ರೆಡಿ ಮಾಡಿಕೊಂಡಿದ್ದಾರೆ. ಜೊತೆಗೆ ಸಿನಿಮಾದ ಫಸ್ಟ್​ ಲುಕ್​ ರಿಲೀಸ್​​ ಮಾಡಲಾಗಿದೆ. ರಿಶಬ್​ ಶೆಟ್ಟಿ ಅವರು ಒಂದು ಕೈಯಲ್ಲಿ ತ್ರಿಶೂಲ, ಮತ್ತೊಂದು ಕೈಯಲ್ಲಿ ಖಡ್ಗ ಹಿಡಿದಿದ್ದಾರೆ. ಈ ಪೋಸ್ಟರ್​​ ಕೂಡ ಸೋಶಿಯಲ್​ ಮೀಡಿಯಾದಲ್ಲಿ ಸಖತ್​​ ವೈರಲ್​ ಆಗಿದೆ. ‘ಇದು ಬೆಳಕಲ್ಲ ದರ್ಶನ’ ಎನ್ನುವ ಡೈಲಾಗ್​ ಕೇಳಿದೆ. ಕಾಂತಾರ ಸಿನಿಮಾದಲ್ಲಿ ಈ ಡೈಲಾಗ್​ ಹೆಚ್ಚು ವೈರಲ್​ ಆಗಿತ್ತು. ಆ ಡೈಲಾಗ್​​ ಇಲ್ಲಿಯೂ ಇದೆ. ಕದಂಬರ ಕಾಲದ ಕಥೆ ಸಿನಿಮಾದಲ್ಲಿದೆ.

Comments (0)

Your email address will not be published. Required fields are marked *

Back to top button