#Exclusive NewsTop Newsಉಪ ಚುನಾವಣೆಜಿಲ್ಲೆಸುದ್ದಿ

ಕಾಂಗ್ರೇಸ್​ ನಾಯಕರ ಟಾರ್ಗೆಟ್ ನಿಖಿಲ್ ಕುಮಾರಸ್ವಾಮಿ ಅಲ್ಲ:ಹೆ.ಚ್.ಡಿ ಕುಮಾರಸ್ವಾಮಿ

ಚನ್ನಪಟ್ಟಣ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಮಾಡುತ್ತಾ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ, ಸ್ಥಳೀಯ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ನಿಖಿಲ್ ಕುಮಾರಸ್ವಾಮಿಯವರನ್ನು ಸ್ಪರ್ಧೆಗಿಳಿಸುವುದು ಅನಿವಾರ್ಯವಾಗಿತ್ತು, ಆದರೆ ಕಾಂಗ್ರೆಸ್ ನಾಯಕರ ಟಾರ್ಗೆಟ್ ಅವರಲ್ಲ, ನಿಖಿಲ್​ರನ್ನು ಸೋಲಿಸುವ ಮೂಲಕ ಕೇಂದ್ರದಲ್ಲಿ ಮಂತ್ರಿಯಾಗಿ ಹೆಚ್ಚುತ್ತಿರುವ ತನ್ನ ಪ್ರಭಾವ ಮತ್ತು ಬೆಳವಣಿಗೆಯನ್ನು ಕುಂಠಿತಗೊಳಿಸುವುದು ಅವರ ಉದ್ದೇಶವಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.ವಿಧಾನಸಭಾ ಚುನಾವಣೆ ಸಂದರ್ಭದಲ್ಲೇ ತಾನು ಕಾಂಗ್ರೆಸ್ ನಾಯಕರ ಕುತಂತ್ರಗಳನ್ನು ಅರ್ಥಮಾಡಿಕೊಂಡಿರುವುದಾಗಿ ಹೇಳಿದ ಕುಮಾರಸ್ವಾಮಿ ತಮಗೆ ಕೇವಲ 19 ಸ್ಥಾನದಕ್ಕಿದ್ದರೂ 12 ಶಾಸಕರನ್ನು ಖರೀದಿಸುವ ಪ್ರಯತ್ನ ಕಾಂಗ್ರೆಸ್ ಪಕ್ಷದಿಂದ ನಡೆಯಿತು, ಆದರೆ ಅದು ಸಾಧ್ಯವಾಗದೆ ಹೋಗಿದ್ದು ಬೇರೆ ವಿಚಾರ ಎಂದರು.

Comments (0)

Your email address will not be published. Required fields are marked *

Back to top button