Wednesday, January 28, 2026
17 C
Bengaluru
Google search engine
LIVE
ಮನೆUncategorizedಕಾಂಗ್ರೆಸ್ ಸರ್ಕಾರ ಎಡಬಿಡಂಗಿ ಸರ್ಕಾರ : ಆರ್​. ಅಶೋಕ್

ಕಾಂಗ್ರೆಸ್ ಸರ್ಕಾರ ಎಡಬಿಡಂಗಿ ಸರ್ಕಾರ : ಆರ್​. ಅಶೋಕ್

ಬೆಳಗಾವಿ : ರಾಜ್ಯದಲ್ಲಿ ದಲಿತರ ಹಣ ದುರ್ಬಳಕೆ ಆಗಬಾರದು. ಸರ್ಕಾರ ರಾಜ್ಯದ ಜನತೆ ಮೇಲೆ ತೆರಿಗೆ ಹಾಕ್ತಿದ್ದೀರಿ. ರಾಜ್ಯದಲ್ಲಿ ಬರಗಾಲ ಉಂಟಾಗಿದೆ. ಕಾಂಗ್ರೆಸ್ ಸರ್ಕಾರದ ಬಳಿ ಹಣವಿಲ್ಲದೇ ಪಾಪರ್ ಆಗಿದ್ದಾರೆ. ಜನರ ಮೇಲೆ ವಿಪರಿತ ತೆರಿಗೆ ಹಾಕಿ ಹಣ ವಸೂಲಿ ಮಾಡೋಕೆ ಹೋಗ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್​.ಅಶೋಕ್​ ಕಾಂಗ್ರೆಸ್​​ ವಿರುದ್ಧ ಕಿಡಿಕಾರಿದರು.

ಕಾಂಗ್ರೆಸ್​​ನವರು ಚುನಾವಣೆಗೂ ಮುಂಚೆ ಗ್ಯಾರಂಟಿಗಳ‌ನ್ನು ಕೊಟ್ರು. ಇವರ ಬಳಿ ರೈತರಿಗೆ ಕೊಡೋಕೆ ಹಣವಿಲ್ಲ. ಆದ್ರೆ ಅಲ್ಪಸಂಖ್ಯಾತರಿಗೆ ಮಾತ್ರ ಕೋಟಿ ಕೋಟಿ ಹಣ ಕೊಡ್ತೀನಿ ಅಂತ ಹೇಳ್ತಾರೆ. ಸರ್ಕಾರ ಅಲ್ಪಸಂಖ್ಯಾತರ ಓಲೈಕೆ ಮಾಡ್ತಿದೆ. ರಾಜ್ಯದಲ್ಲಿ ಬರಗಾಲವಿದೆ. ರಾಜ್ಯದಲ್ಲಿ ಒಣಮೇವು, ಹಸಿ ಮೇವಿನ ಅಭಾವ ಉಂಟಾಗಿದೆ. ರಾಜ್ಯದ ಯಾವ ಭಾಗದಲ್ಲಿಯೂ ಗೋಶಾಲೆ ತೆರೆದಿಲ್ಲ. ಕಾಂಗ್ರೆಸ್ ಸರ್ಕಾರ ಎಡಬಿಡಂಗಿ ಸರ್ಕಾರವಾಗಿದೆ. ಮೌಲ್ವಿಗಳಿಗೆ ದುಡ್ಡು ಕೊಡೋಕೆ ಜೇಬಿನಲ್ಲಿ ಹತ್ತು ಸಾವಿರ ಕೋಟಿ ಇಟ್ಕೊಂಡು ಅಡ್ಡಾಡುತ್ತಾರೆ. ಇದ್ಯಾವ ನ್ಯಾಯ ಎಂದು ಆರ್.ಅಶೋಕ ಪ್ರಶ್ನಿಸಿದರು. ಕಾಂಗ್ರೆಸ್ ಸರ್ಕಾರ ಒಡೆದಾಳುವ ನೀತಿ ಅನುಸರಿಸುತ್ತಿದೆ ಎಂದು ಕಾಂಗ್ರೆಸ್​ ವಿರುದ್ಧ ಆರ್​. ಅಶೋಕ್​ ಗುಡುಗಿದರು.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments