ದಾವಣಗೆರೆ : ಯತ್ನಾಳ್ ರವರು ಯಡಿಯೂರಪ್ಪನವರ ಬಗ್ಗೆ ಮಾತನಾಡೋದು ಸರಿಯಲ್ಲ ಎಂದು ಯತ್ನಾಳ್ಗೆ ರೇಣುಕಾಚಾರ್ಯ ವಾರ್ನಿಂಗ್ ನೀಡಿದರು. ಹಿರಿಯ ನಾಯಕರು, ಕೇಂದ್ರ ಸಚಿವರಾಗಿದ್ದವರು ನೀವು ಯಡಿಯೂರಪ್ಪ ಹಾಗೂ ವಿಜಯೇಂದ್ರ ಬಗ್ಗೆ ಮಾತನಾಡುವುದು ಸರಿಯಲ್ಲ. ಕೇಂದ್ರದ ನಾಯಕರು ಅಳೆದು ತೂಗಿ ರಾಜ್ಯಾಧ್ಯಕ್ಷ ರನ್ನಾಗಿ ಮಾಡಿದ್ದಾರೆ. ಹೀಗೆ ಮಾತನಾಡುತ್ತಾ ಹೋದರೆ ಯತ್ನಾಳ್ ವಿಲನ್ ಆಗುತ್ತಾರೆ ಎಂದರು.
ಜಿಡಿಎಸ್ ಗೆ ಹೋದವರನ್ನು ಬಿಜೆಪಿಗೆ ಕರೆತಂದಿದ್ದು ಯಡಿಯೂರಪ್ಪ ನವರು, ಕೇಂದ್ರದ ನಾಯಕರ ಬಳಿ ಯಡಿಯೂರಪ್ಪ ನವರ ಬಗ್ಗೆ ದೂರು ನೀಡುತ್ತಾರೆ. ಹೀಗೆ ಮುಂದುವರೆದರೆ ನಾವು ಕೂಡ ಕೇಂದ್ರದ ಬಳಿ ಹೋಗುತ್ತೇವೆ ಮಾತನಾಡುತ್ತೇವೆ ಎಂದು ಯತ್ನಾಳ್ಗೆ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಎಚ್ಚರಿಕೆ
ಇನ್ನೂ..ಮೌಲಿ ಹಾಗೂ ಯತ್ನಾಳ್ ಇಬ್ಬರು ಬ್ಯುಸಿನೆಸ್ ಪಾರ್ಟ್ನರ್ ವಿಚಾರವಾಗಿ ಮಾತನಾಡಿದ ಅವರು, ಇದೊಂದು ಕಾಂಗ್ರೆಸಿಗರು ಸೃಷ್ಟಿಸಿದ ಸುಳ್ಳು. ಯಾವುದೇ ದಾಖಲೆಗಳು ಇಲ್ಲ ಬರೀ ಸುಳ್ಳು ಯತ್ನಾಳ್ ಒಬ್ಬ ಕಟ್ಟ ಹಿಂದೂತ್ವವಾಗಿ, ಮೈಯಲ್ಲೊ ಹಿಂದೂತ್ವ ಇರೋರು. ಮೌಲ್ವಿ ವಿರುದ್ಧ ಹೆಚ್ವಿನ ತನಿಖೆಗೆ ಅಗ್ರಹಿಸುತ್ತೇವೆ ಎಂದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ. ಕೊಟ್ಟ ಭರವಸೆಗಳನ್ನು ಇದುವರೆಗೂ ಈಡೇರಿಸಿಲ್ಲ. 40% ಕಮಿಷನ್ ಎಂದು ಕೆಂಪಣ್ಣ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ ಎಂದು ಕಾಂಗ್ರೆಸ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಅಲ್ಲದೇ ಮಾಜಿ ಸಚಿವ ಗೂಳಿಹಟ್ಟ ಶೇಖರ್ ಹೇಳಿಕೆ ವಿಚಾರವಾಗಿ ರೇಣುಕಾಚಾರ್ಯ ಪ್ರತಿಕ್ರಿಯೆ ನೀಡಿದ್ದು, ಗೂಳಿಹಟ್ಟಿ ಶೇಖರ್ ನನ್ನ ಸ್ನೇಹಿತ. ಆರ್ ಎಸ್ ಎಸ್ ನಲ್ಲಿ ಭಾರತ ಮಾತೆಯ ಪೋಟೋ ಇಟ್ಟು ಪೊಜೆ ಮಾಡುತ್ತಾರೆ. ಭಾರತ ಮಾತೆಯ ನಂಬಿದವರು ಎಲ್ಲರನ್ನು ನಮ್ಮವರು ಎನ್ನುತ್ತಾರೆ. ಜಾತಿ ಧರ್ಮ ಎಂದು ಯಾರನ್ನು ನೋಡುವುದಿಲ್ಲ, ನಾನು ಕೂಡ ನಾಗಪುರ್ ಕಚೇರಿಗೆ ಹೋಗಿದ್ದೇನೆ. ವೀರ ಸಾವರ್ಕರ್ ಬಗ್ಗೆ ಪ್ರಿಯಾಂಕ ಖರ್ಗೆ ಮಾತನಾಡುತ್ತಾರೆ. ವೀರ ಸಾವರ್ಕರ್ ಬಗ್ಗೆ ಸಿದ್ದರಾಮಯ್ಯ ಹೇಳಿಕೆ ನೀಡುತ್ತಾರೆ. ಆದರೆ ಸಿದ್ದರಾಮಯ್ಯ ಮತಾಂದ ಟಿಪ್ಪುವಿನ ಜಯಂತಿ ಮಾಡುತ್ತಾರೆ. ಔರಂಗಜೇಬನ ಕಟೌಂಟ್ ಹಾಕಿದರು ಸುಮ್ಮನೆ ಇರ್ತಾರೆ. ಆದರೆ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಅವಹೇಳನವಾಗಿ ಮಾತನಾಡುತ್ತಾರೆ ಎಂದು ದಾವಣಗೆರೆಯಲ್ಲಿ ಮಾಜಿ ಸಚಿವ ರೇಣುಕಾಚಾರ್ಯ ಹೇಳಿದರು.
hii