ತುಮಕೂರು : ಕಾಂಗ್ರೆಸ್ ಸರ್ಕಾರ ಬೀಳಿಸಲು ಕಾಂಗ್ರೆಸ್ನ 50 ಶಾಸಕರು ಸಿದ್ಧರಾಗಿದ್ದಾರೆ. ಕಾಂಗ್ರೆಸ್ಗೆ ಕಾಂಗ್ರೆಸ್ನವರೇ ಟಾಂಗ್ ಕೊಟ್ಟು ಸರ್ಕಾರ ಬೀಳಿಸ್ತಾರೆ ಎಂದು ತುಮಕೂರಿನಲ್ಲಿ ಬಿಜೆಪಿ ಶಾಸಕ ಬಿ.ಸುರೇಶ್ ಗೌಡ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಡಿಕೆಶಿ ಅವರ ಸಿಎಂ ಆಗುವ ಹಗಲು ಗನಸು ನನಸಾಗದೇ ಹಾಗೇ ಉಳಿಯಲಿದೆ. ಮೂರು ರಾಜ್ಯಗಳಲ್ಲಿ ಬಿಜೆಪಿ ಭರ್ಜರಿ ಜಯಬೇರಿ ಹಿನ್ನಲೆ, ಯಾರ್ ಯಾರು ಆಪರೇಷನ್ ಮಾಡಬೇಕು ಅಂತಾ ಕುತಂತ್ರದಿಂದ ಕೂತಿದ್ರೋ, ಜಗದೀಶ್ ಶೆಟ್ಟರ್, ಲಕ್ಷ್ನಣ್ ಸವದಿ ಟೀಕೆಗೆ ದೇಶದ ಜನ ಉತ್ತರ ಕೊಟ್ಟಿದ್ದಾರೆ. ಕಾಂಗ್ರೆಸ್ಗೆ ಹೋಗಿರೋ ಬಿಜೆಪಿ ನಾಯಕರು ಯೋಚನೆ ಮಾಡಿ ಮಾತನಾಡಬೇಕು. ಧಮ್ ಇದ್ರೆ ಈಗ ಬಿಜೆಪಿ ಬಿಡ್ಲಿ, ಕಾಂಗ್ರೆಸ್ಗೆ ಹೋಗಿ ಗೆಲ್ಲಿ ನೋಡೋಣ. ಜೆಡಿಎಸ್- ಬಿಜೆಪಿ ಮೈತ್ರಿಯಲ್ಲಿ ಬಿಜೆಪಿ ಬಿಟ್ಟು ಕಾಂಗ್ರೆಸ್ನಲ್ಲಿ ಗೆಲ್ಲಿ ನೋಡೋಣ. ತುಮಕೂರಿನಲ್ಲಿ ಅಭ್ಯರ್ಥಿ ಯಾರೇ ಆದರೂ 1ರಿಂದ ಒಂದೂವರೆ ಲಕ್ಷ ಲೀಡ್ ಕೊಡ್ತೀವಿ. ಈ ಬಾರಿ ಲೋಕಸಭೆ ಚುನಾವಣೆಯಲ್ಲಿ 400ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ. ರಾಜ್ಯದಲ್ಲಿ 28ಕ್ಕೆ 28 ಸ್ಥಾನಗಳನ್ನು ಬಿಜೆಪಿ ಗೆಲ್ಲೋವು ಪಕ್ಕಾ ಎಂದು ಶಾಸಕ ಬಿ. ಸುರೇಶ್ ಗೌಡ ತಿಳಿಸಿದರು.