Freedom TV

ಒಳ್ಳೆಯ ಲೀಡ್ನಲ್ಲಿ ಗೆಲ್ತೀನಿ – ಪ್ರಜ್ವಲ ರೇವಣ್ಣ

ಹಾಸನ : ಇನ್ನೆರಡು, ಮೂರು ದಿನಗಳಲ್ಲಿ ಕರ್ನಾಟಕ ರಾಜ್ಯದ ಎಲ್ಲಾ ಲೋಕಸಭಾ ಕ್ಷೇತ್ರಗಳ ಟಿಕೆಟ್‌ಗಳನ್ನು ಘೋಷಣೆ ಮಾಡ್ತಾರೆ. ಖಂಡಿತವಾಗಿಯೂ ಒಳ್ಳೆಯ ಲೀಡ್‌ನಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಗೆಲ್ತೀನಿ ಎಂದು ಸಂಸದ ಪ್ರಜ್ವಲ ರೇವಣ್ಣ ಭರವಸೆ ವ್ಯಕ್ತಪಡಿಸಿದರು. ಹಾಸನದಲ್ಲಿ ಮಾತನಾಡಿದ ಸಂಸದ ಪ್ರಜ್ವಲ್‌ ರೇವಣ್ಣ, ನನಗೆ ಬಂದಿರುವ ಮಾಹಿತಿ ಪ್ರಕಾರ ಭಾನುವಾರ ಅಥವಾ ಸೋಮವಾರ ಬಿಜೆಪಿ-ಜೆಡಿಎಸ್ ಟಿಕೆಟ್ ಅನೌನ್ಸ್ ಮಾಡ್ತಾರೆ. ಜೆಡಿಎಸ್‌ಗೆ ಎಷ್ಟು ಟಿಕೆಟ್ ಕೊಡಬೇಕು ಎಂದು ಎರಡು ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತೆ. ಟಿಕೆಟ್ ಕೊಟ್ಟ ಮೇಲೆ ಕೆಲಸ ಮಾಡುತೀವಿ. ಈಗಾಗಲೇ ಒಂದು ರೌಂಡ್ ಎಲ್ಲಾ ಪಂಚಾಯಿತಿಗೆ ಹೋಗಿದ್ದೀನಿ, ಹಳ್ಳಿಗಳಿಗೆ ಭೇಟಿ ನೀಡಿದ್ದೀನಿ.ಏನಾದರೂ ಸರಿಪಡಿಸಿಕೊಳ್ಳುವುದಿದ್ದರೆ ಸರಿಪಡಿಸಿಕೊಳ್ತಿನಿ.ನಾವು ಎಲ್ಲರ ಜೊತೆ ಟಚ್‌ನಲ್ಲಿ ಇದ್ದೀನಿ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡ್ತಾ ಇದ್ದೀನಿ.ನಿನ್ನೆಯೂ ಕೂಡ ಬಿಜೆಪಿ ನಾಯಕರು ಕರೆ ಮಾಡಿದ್ರು. ನಮ್ಮ ಪಕ್ಷದ ಪೂರ್ವಭಾವಿ ಸಭೆಗಳು ನಡೆದಿವೆ.ಈಗ ಜಂಟಿ ಪೂರ್ವಭಾವಿ ಸಭೆಗಳು‌ ನಡೆಯಬೇಕು .ಮಾ.12-15 ರೊಳಗೆ ಚುನಾವಣೆ ಅನೌನ್ಸ್ ಆಗಬಹುದು.ದೇವೇಗೌಡರು ಎಲ್ಲಾ ಕಡೆ ಪ್ರಚಾರ ಮಾಡುತ್ತಾರೆ.ದೇವೇಗೌಡರಿಗೆ ಹೆಚ್ಚು ಅನುಭವವಿದೆ.ಎಲ್ಲದ್ದನ್ನೂ ಸರಿ ಮಾಡುವ ಕೆಲಸ ಮಾಡ್ತಿನಿ ಎಂದ ಪ್ರಜ್ವಲ್ ಈ ಬಾರಿ ಗೆಲ್ಲುವ ಭರವಸೆ ವ್ಯಕ್ತಪಡಿಸಿದ್ದಾರೆ.

Comments (0)

Your email address will not be published. Required fields are marked *

Back to top button