ವೈರಲ್ ನ್ಯೂಸ್

ಇದು ಸಾಮಾನ್ಯ ಮಳೆಯಲ್ಲ.. ಮೀನಿನ ಮಳೆ

ನಮಗೆ ಬಿರುಸಿನ ಮಳೆ, ಜೋರು ಮಳೆ ಗೊತ್ತು.. ಆಲಿಕಲ್ಲು ಮಳೆಯೂ ಗೊತ್ತು.. ಆದ್ರೆ ಇದ್ಯಾವುದಪ್ಪಾ ಮೀನಿನ ಮಳೆ ಅಂತೀರಾ..? ನಿಜಕ್ಕೂ ಆಕಾಶದಿಂದ ಮೀನಿನ ಮಳೆ ಬಿದ್ದಿದೆ.. ದೊಡ್ಡ ದೊಡ್ಡ ಮೀನುಗಳೇ ಆಕಾಶದಿಂದ ಮಳೆ ಹನಿಯಂತೆ ಉದುರುಬಿದ್ದಿವೆ.. ಬೇಕಿದ್ರೆ ನೀವೂ ಈ ವಿಡಿಯೋ ನೋಡಿ

ಜೋರು ಮಳೆ ಸುರಿಯುತ್ತಿರುವಾಗ ನೀರಿನ ಹನಿಯೊಂದಿಗೆ ಮೀನುಗಳೂ ಬಿದ್ದರೆ ಹೇಗಿರುತ್ತದೆ…? ಈ ಮೇಲಿನ ವಿಡಿಯೋ ನೋಡಿದ್ಮೇಲೆ ನಿಮಗೂ ಅಚ್ಚರಿ ಆಗಿದೆ ಅಲ್ವಾ? ಇರಾನ್‌ನ ‘ಯಸುಜ್’ ನಗರದಲ್ಲಿ ನಡೆದ ಘಟನೆ ಇದು.. ‘ಯಸುಜ್’ ಇರಾನ್‌ನ ಸಣ್ಣ ಹಾಗೂ ಕೈಗಾರಿಕಾ ನಗರದಲ್ಲಿ ಇಂಥಾ ಮೀನಿನ ಮಳೆ ಬಿದ್ದಿದೆ.  ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮಳೆಯೊಂದಿಗೆ ಮೀನುಗಳು ಬೀಳುತ್ತಿರುವುದನ್ನು ಕಾಣಬಹುದು. ಇಡೀ ಪ್ರದೇಶದಲ್ಲೇ ಮೀನುಗಳು ಆಕಾಶದಿಂದ ಉದುರಿವೆ..  ಹೀಗೆ ಕಣ್ಣೆದುರು ಮೀನು ಬಿದ್ದಾಗ ಕುತೂಹಲದಿಂದ ಎತ್ತಿಕೊಂಡ ಜನರು ಅದರ ದೃಶ್ಯವನ್ನೂ ಸೆರೆ ಹಿಡಿದಿದ್ದಾರೆ. ಸಹಜವಾಗಿಯೇ ಈ ದೃಶ್ಯ ಅಚ್ಚರಿ ಮೂಡಿಸುವಂತಿದೆ.

Comments (0)

Your email address will not be published. Required fields are marked *

Back to top button