ಇಂದ್ರಜಿತ್ ಲಂಕೇಶ್ ಪುತ್ರ ಸ್ಯಾಂಡಲ್ವುಡ್ಗೆ ಭರ್ಜರಿ ಎಂಟ್ರಿ…

ಸ್ಯಾಂಡಲ್ವುಡ್ನ ಕ್ರಿಯೇಟಿವ್ ಡೈರೆಕ್ಟರ್ ಇಂದ್ರಜಿತ್ ಲಂಕೇಶ್ ‘ಗೌರಿ’ ಅನ್ನೋ ಸಿನಿಮಾ ಮಾಡ್ತಿರೋದು, ಮತ್ತು ಆ ಚಿತ್ರದ ಮೂಲಕ ತಮ್ಮ ಸುಪುತ್ರನನ್ನ ಬಿಗ್ ಸ್ಕ್ರೀನ್ಗೆ ಲಾಂಚ್ ಮಾಡ್ತಿರೋ ವಿಷ್ಯ ಗೊತ್ತೇ ಇದೆ. ಸದ್ಯ ಗೌರಿ ಸಿನಿಮಾ ಕಂಪ್ಲೀಟ್ ಆಗಿದ್ದು, ಪ್ರೀ ಟೀಸರ್ ಮೂಲಕ ಮೊದಲ ಝಲಕ್ ನ ಸಿನಿಪ್ರಿಯರಿಗೆ ತೋರಿಸಿದೆ ಸಿನಿತಂಡ. ಕ್ರಿಕೆಟ್ ದಿಗ್ಗಜ ಅನಿಲ್ ಕುಂಬ್ಳೆ, ಮತ್ತು ಪಿಆರ್ಕೆ ಒಡತಿ ಅಶ್ವಿನಿ ಪುನೀತ್ರಾಜ್ಕುಮಾರ್ ಗೌರಿ ತಂಡಕ್ಕೆ ಸಾಥ್ ಕೊಟ್ಟಿದ್ದು ಗೌರಿ ಗದ್ದಲದ ಝಲಕ್ ಇಲ್ಲಿದೆ ನೋಡಿ.

ಗೌರಿ ಸಿನಿಮಾದ ಪ್ರೀ ಟೀಸರ್ ಲಾಂಚ್ ಆಗಿದೆ. ಅರೇ ಟೀಸರ್ ಗೊತ್ತು ಇದೇನಿದು ಪ್ರೀ ಟೀಸರ್ ಅಂತೀರಾ. ಅದೇ ಗೌರಿ ಸ್ಪೆಷಾಲಿಟಿ. ಸ್ಟೈಲಿಶ್ ಡೈರೆಕ್ಟರ್ ಇಂದ್ರಜಿತ್ ಲಂಕೇಶ್ ತಮ್ಮ ಗೌರಿ ಚಿತ್ರದ ಟೀಸರ್ಗೂ ಮುನ್ನ ಪ್ರೀ ಟೀಸರ್ ಹೆಸರಲ್ಲಿ ಪುಟ್ಟ ಝಲಕ್ ರಿವೀಲ್ ಮಾಡಿದ್ದಾರೆ.
ಈ ಚಿತ್ರದ ಮೂಲಕ ಲಾಂಚ್ ಆಗ್ತಾ ಇರೋ ಲಂಕೇಶ್ ಕುಟುಂಬದ 3ನೇ ತಲೆಮಾರಿನ ಕುಡಿ ಸಮರ್ಜಿತ್, ಪ್ರೀ ಟೀಸರ್ನಲ್ಲಿ ಸಖತ್ ಸ್ಟೈಲಿಶ್ ಅವತಾರದಲ್ಲಿ ಮಿಂಚಿದ್ದು, ಆಕ್ಷನ್ ದೃಶ್ಯಗಳಲ್ಲಿ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ.

ಇನ್ನೂ ಈ ಪ್ರೀ ಟೀಸರ್ ಲಾಂಚ್ ಇವೆಂಟ್ನಲ್ಲಿ ಪಿ.ಆರ್.ಕೆ ಒಡತಿ ಅಶ್ವಿನಿ ಪುನೀತ್ ರಾಜ್ಕುಮಾರ್ ಮತ್ತು ಕ್ರಿಕೆಟ್ ಲೋಕದ ದಿಗ್ಗಜ ಅನಿಲ್ ಕುಂಬ್ಳೆ ಭಾಗಿಯಾಗಿ ಗೌರಿ ಟೀಂಗೆ ಶುಭಹಾರೈಸಿದ್ರು. ಇಂದ್ರಜಿತ್ ಇಂಟ್ರಟ್ಯೂಸ್ ಮಾಡಿದ ದೀಪಿಕಾ ಪಡುಕೋಣೆ ಇವತ್ತು ನ್ಯಾಷನಲ್ ಸ್ಟಾರ್ ಆಗಿ ಮಿಂಚ್ತಾ ಇದ್ದಾರೆ. ಗೌರಿ ಚಿತ್ರದಿಂದ ಇಂಟ್ರಡ್ಯೂಸ್ ಆಗ್ತಿರೋ ಸಮರ್ಜಿತ್ & ಸಾನ್ಯಾ ಕೂಡ ಅದೇ ಲೆವೆಲ್ಗೆ ಬೆಳೆಯಲಿ ಅಂತ ಹಾರೈಸಿದ್ರು ಅನಿಲ್ ಕುಂಬ್ಳೆ.
ಅನಿಲ್ ಕುಂಬ್ಳೆ ಆರಂಭಿಕ ದಿನಗಳಲ್ಲಿ ಇಂದ್ರಜಿತ್ ಜೊತೆ ಕ್ರಿಕೆಟ್ ಆಡ್ತಾ ಇದ್ದವರು. ಸೋ ಅದೇ ಸ್ನೇಹಕ್ಕಾಗಿ ಇಂದ್ರಜಿತ್ ಸಿನಿಮಾದ ಪ್ರೀ ಟೀಸರ್ ಲಾಂಚ್ಗೆ ಆಗಮಿಸಿ ಟೀಂಗೆ ಆಲ್ದಿ ಬೆಸ್ಟ್ ಹೇಳಿದ್ರು. ಕುಂಬ್ಳೆ ಜೊತೆಗಿನ ಕ್ರಿಕೆಟ್ ಗ್ರೌಂಡ್ ನೆನಪುಗಳನ್ನ ಇಂದ್ರಜಿತ್ ಹಂಚಿಕೊಳ್ಳೋದ್ರ ಜೊತೆಗೆ ಚಿತ್ರದ ಸ್ಪೆಷಾಲಿಟಿಗಳನ್ನ ಹಂಚಿಕೊಂಡ್ರು.
ಗೌರಿ ಸಿನಿಮಾದಲ್ಲಿ ಸರ್ಮಜಿತ್ಗೆ ಜೋಡಿಯಾಗಿರೋದು ಪುಟ್ಟಗೌರಿ ಖ್ಯಾತಿಯ ಸಾನ್ಯಾ ಅಯ್ಯರ್. ಈ ಇಬ್ಬರು ಯುವತಾರೆಯರು ಭರ್ಜರಿ ತಯಾರಿ ಮಾಡಿಕೊಂಡೇ ಸಿನಿ ಅಖಾಡಕ್ಕೆ ಇಳೀತಾ ಇದ್ದಾರೆ.

ಗೌರಿ ಸಿನಿಮಾದ ನಾಯಕ ನಾಯಕಿ ಹೊಸಬರಾದ್ರೂ ಇದರ ಹಿಂದಿರೋ ತಂತ್ರಜ್ಞರ ಬಳಗದಲ್ಲಿ ಮಾತ್ರ ಇಂಡಸ್ಟ್ರಿಯ ಘಟಾನುಘಟಿಗಳಿದ್ದಾರೆ. ಮಾಸ್ತಿ, ಬಿ.ಎ ಮಧು ಮತ್ತು ರಾಜಶೇಖರ್ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಚಂದನ್ ಶೆಟ್ಟಿ, ಜೆಸ್ಸಿ ಗಿಫ್ಟ್, ಅನಿರುಧ್ ಶಾಸ್ತ್ರಿ ಚಿತ್ರದ ಹಾಡುಗಳಿಗೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಮ್ಯಾಥ್ಯುಸ್ ಮನು ಹಿನ್ನೆಲೆ ಸಂಗೀತ ನೀಡಿದ್ದಾರೆ. ಕೃಷ್ಣಕುಮಾರ್ ಸಿನಿಮಾಟೋಗ್ರಫಿ, ರವಿವರ್ಮ ಸಾಹಸ ನಿರ್ದೇಶನ ಚಿತ್ರಕ್ಕಿದೆ.
ಮಾಸ್ತಿ, ಸಂಭಾಷಣೆಗಾರ, ಅನಿರುಧ್ ಶಾಸ್ತ್ರಿ, ಸಂಗೀತ ನಿರ್ದೇಶಕ.. 
ಒಟ್ಟಾರೆ ಗೌರಿ ಪ್ರತಿಭಾನ್ವಿತ ಯುವ ನಟರುಗಳು ಮತ್ತು ಅನುಭವಿ ತಂತ್ರಜ್ಞರುಗಳು ಒಟ್ಟಾಗಿ ಮಾಡಿರೋ ಸಿನಿಮಾ ಗೌರಿ. ಸದ್ಯ ತನ್ನ ಪ್ರೀ ಟೀಸರ್ ಝಲಕ್ನಿಂದಲೇ ನಿರೀಕ್ಷೆಯನ್ನ ಹುಟ್ಟಿಹಾಕಿರೋ ಗೌರಿ ಸದ್ಯದಲ್ಲೇ ಪ್ರೇಕ್ಷಕರೆದ್ರು ಬರಲಿದೆ.




