Wednesday, September 10, 2025
22.3 C
Bengaluru
Google search engine
LIVE
ಮನೆ#Exclusive Newsಇಂದು ಬೆಂಗಳೂರಿನ ಟಿಟಿಡಿ ದೇವಸ್ಥಾನದಲ್ಲಿ ಭಕ್ತರಿಗಿಲ್ಲ ದರ್ಶನ!

ಇಂದು ಬೆಂಗಳೂರಿನ ಟಿಟಿಡಿ ದೇವಸ್ಥಾನದಲ್ಲಿ ಭಕ್ತರಿಗಿಲ್ಲ ದರ್ಶನ!

ತಿರುಪತಿ ಲಡ್ಡುವಿನಲ್ಲಿ  ಮಾಂಸದ ಕೊಬ್ಬನ್ನ ಬಳಕೆ ಮಾಡಲಾಗಿದೆ ಎನ್ನುವ ಆರೋಪದ ಹಿನ್ನೆಲೆ ನಿನ್ನೆ ಆಂಧ್ರದ ತಿರುಪತಿ ಟಿಟಿಡಿ ದೇವಸ್ಥಾನದಲ್ಲಿ  ಶುದ್ದೀಕರಣ‌ ಮಾಡಲಾಗಿದೆ.‌ ಅದರಂತೆ‌ ಇಂದು ಬೆಂಗಳೂರಿನ ಟಿಟಿಡಿ ದೇವಸ್ಥಾನದಲ್ಲಿ ಶುದ್ದಿಕರಣ ನಡೆಯಲಿದ್ದು, ಇಂದು ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಬ್ರೇಕ್‌ ಹಾಕಲಾಗಿದೆ.ತಿರುಪತಿ ಲಡ್ಡುವಿನಲ್ಲಿ ಮಾಂಸದ ಕೊಬ್ಬು ಬಳಕೆ ಮಾಡಿಕೊಂಡಿದ್ದಾರೆ ಎನ್ನುವ ಆರೋಪ ವಿವಾದ ಹಿನ್ನೆಲೆ ಸಧ್ಯ ಕೋಟ್ಯಂತರ ಹಿಂದೂಗಳ ಭಾವನೆಗಳಿಗೆ ದಕ್ಕೆಯಾಗಿದೆ.‌ ಇದನ್ನ ಕೊಂಚಮಟ್ಟಿಗಾದ್ರು ಸರಿಪಡಿಸುವ ಸಲುವಾಗಿ ನಿನ್ನೆ ತಿರುಪತಿಯಲ್ಲಿ ಶಾಂತಿ ಹೋಮ ಮಾಡಿ ಪಂಚಗವ್ಯ ಸಂಪೋಕ್ಷಣೆ ಮಾಡಲಾಗಿದೆ.‌ ಅದರಂತೆ ಇಂದು ಬೆಂಗಳೂರು ನಗರದ ಟಿಟಿಡಿ ದೇವಸ್ಥಾನದಲ್ಲೂ ಶುದ್ಧೀಕರಣಕ್ಕೆ ಅಣಿ ಮಾಡಿದ್ದು, ಇಂದು ಬೆಳ್ಳಗ್ಗೆಯಿಂದ ಆರಂಭವಾಗಿದೆ. ಇನ್ನು ಇಂದು ಶುದ್ದೀಕರಣ ಮಾಡಿ ಇದೇ ಶುಕ್ರವಾರದಿಂದ ಭಾನುವಾರದವರೆಗೂ ಪವಿತ್ರೋತ್ಸವ ಮಾಡಲಾಗುತ್ತಿದೆ. ಈ ಪವಿತ್ರತ್ರೋತ್ಸೋವಕ್ಕೆ ತಿರುಪತಿಯಿಂದಲೇ ಅರ್ಚಕರುಗಳು ಬರಲಿದ್ದು, ಟಿಟಿಡಿ ದೇವಸ್ಥಾನವನ್ನ ಸಂಪೂರ್ಣವಾಗಿ ಶುದ್ದೀಕರಸಿ, ವಿಶೇಷ ಪೂಜೆಗಳು ನೆರೆವೇರಿಸಲಾಗುತ್ತಿದೆ. ಇನ್ನು ಈ ಪವಿತ್ರೋತ್ಸವನ್ನು ಪ್ರತಿವರ್ಷ ಶ್ರಾವಣ ಶನಿವಾರದ ಸಂದರ್ಭದಲ್ಲಿ ಮಾಡಲಾಗುತ್ತಿತ್ತು. ಆದರೆ ಈಗ ಲಡ್ಡು ವಿವಾದ ಕಂಡುಬಂದ ಹಿನ್ನೆಲೆ ಶುದ್ದಿಕಾರ್ಯಕ್ಕೆ ಅಣಿ ಮಾಡಲಾಗಿದೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments