Freedom TV

ಅಚ್ಚೇ ದಿನ್ ಬಂದಿಲ್ಲ-ಲೋಕಸಭೆ ಗೆಲ್ತೇವೆ : ಸಚಿವ ಎಂಬಿ ಪಾಟೀಲ್ ವಿಶ್ವಾಸ

ವಿಜಯಪುರ : ಪಂಚರಾಜ್ಯ ಚುನಾವಣೆಯಲ್ಲಿ 3 ರಾಜ್ಯಗಳಲ್ಲಿ ಬಿಜೆಪಿ ಗೆಲುವು ಹಿನ್ನಲೆ ಸಚಿವ ಎಂ ಬಿ ಪಾಟೀಲ್ ಪ್ರತಿಕ್ರಿಯೆ ನೀಡಿದರು. ಪ್ರಜಾಪ್ರಭುತ್ವ ವ್ಯಸವಸ್ಥೆಯಲ್ಲಿ ಮತದಾರರ ತೀರ್ಪು ಒಪ್ಪಲೇ ಬೇಕು. ಬಹುಶಃ ಅಂತಿಮ ರಿಜಲ್ಟ್ ಬರಬೇಕಿದೆ. ಮೂರು ರಾಜ್ಯದಲ್ಲಿ ಬಿಜೆಪಿ ಮುನ್ನಡೆ ಇದೆ‌. ತೆಲಂಗಾಣದಲ್ಲಿ ಗೆಲುವಿಗೆ ಹತ್ತಿರದಲ್ಲಿದ್ದೇವೆ. ಮತದಾರರ ತೀರ್ಪು ಒಪ್ಪಬೇಕು. ಈ ಚುನಾವಣೆಯಲ್ಲಿ ಬಹಳಷ್ಟು ನಿರೀಕ್ಷೆ ಇತ್ತು. ಎಲ್ಲಿ ಯಡವಿದ್ದೀವಿ, ಯಾಕೆ ಈ ರೀತಿಯ ಫಲಿತಾಂಶ ಬಂತು ಎನ್ನುವ ಬಗ್ಗೆ ಪಕ್ಷದಲ್ಲಿ ಚರ್ಚೆಯಾಗುತ್ತೆ ಎಂದರು.

ಕಾಂಗ್ರೆಸ್ ಗ್ಯಾರಂಟಿ ಕುರಿತು ಮಾತನಾಡಿದ್ರು. ಗ್ಯಾರಂಟಿಗೆ ವಿರೋಧ ಮಾಡಿದವರು ಗ್ಯಾರಂಟಿ ಅನೌನ್ಸ್ ಮಾಡಿದರು. ಕಾರಣಗಳು ಅನೇಕ ಇವೆ. ಕರ್ನಾಟಕದಲ್ಲಿ ಗ್ಯಾರಂಟಿ ವರ್ಕೌಟ್ ಆಗಿದೆ ಅಂತಾಯ್ತಲ್ಲ. ಪಕ್ಷದ ವರಿಷ್ಠರು, ಸಿಡಬ್ಲೂಸಿ ಯಲ್ಲಿ ಚರ್ಚೆಯಾಗಲಿದೆ. ಲೋಕಸಭಾ ಚುನಾವಣೆ ಮೇಲೆ ಪರಿಣಾಮ ವಿಚಾರ. ಪಾರ್ಲಿಮೆಂಟ್ ನಲ್ಲಿ ನಮಗೆ ವಿಶ್ವಾಸ ಇದೆ. ಬೆಲೆ ಏರಿಕೆ, ದೇಶದ ಪರಿಸ್ಥಿತಿ, ಮೋದಿ ಮಾತು ಕೊಟ್ಟಂತೆ ಆಗಿಲ್ಲ. ಅಚ್ಚೆ ದಿನ್ ಯಾರಿಗೂ ಬಂದಿಲ್ಲ. ಜನರು ಬದಲಾವಣೆ ಮಾಡ್ತಾರೆ ಎನ್ನುವ ವಿಶ್ವಾಸ ಇದೆ ನೋಡೋಣ ಎಂದು ಎಂ ಬಿ ಪಾಟೀಲ್ ಹೇಳಿದರು.

Comments (0)

Your email address will not be published. Required fields are marked *

Back to top button