ದೆಹಲಿ: ತಮಿಳುನಾಡು ಗೂಂಡಾ ಕಾಯಿದೆ- 1982ರ ಅಡಿ ಯೂಟ್ಯೂಬರ್ ಸವುಕ್ಕು ಶಂಕರ್ ಅವರನ್ನು ಬಂಧಿಸಿದ್ದ ರಾಜ್ಯ ಸರ್ಕಾರವನ್ನು ಸುಪ್ರೀಂ ಕೋರ್ಟ್ ಸೋಮವಾರ ತರಾಟೆಗೆ ತೆಗೆದುಕೊಂಡಿದೆ.
ತನ್ನ ವಿರುದ್ಧ ಕ್ರಮ ಕೈಗೊಂಡಿದ್ದನ್ನು ಪ್ರಶ್ನಿಸಿ ಶಂಕರ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನಡೆಸಿದ ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರಿದ್ದ ಪೀಠ ರಾಜ್ಯದ ನಡೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತು.
“ಇದೇನು ಮಾಡುತ್ತಿದೀರಿ? ಈ ವ್ಯಕ್ತಿ ಹಿಂದಿ ಬಿದ್ದಿದ್ದೀರಿ. ಅವರು ಜೈಲಿನಿಂದ ಹೊರಗೆ ಬರುತ್ತಿದ್ದಂತೆ ಮತ್ತೆ ಕಂಬಿ ಎಣಿಸುವಂತೆ ಮಾಡುತ್ತಿದ್ದೀರಿ!” ಎಂದು ನ್ಯಾ. ಪರ್ದಿವಾಲಾ ಕಿಡಿಕಾರಿದರು. ಅದರ ಬೆನ್ನಿಗೇ ಗೂಂಡಾ ಕಾಯಿದೆಯಿಡಿ ಕ್ರಮ ಕೈಗೊಂಡಿದ್ದನ್ನು ಪ್ರಶ್ನಿಸಿ ಸವುಕ್ಕು ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಪ್ರಕರಣವನ್ನು ಮುಂದೂಡಲಾಗಿದ್ದು ತಮಿಳುನಾಡು ಪೊಲೀಸರು ದಾಖಲಿಸಿರುವ ಹೊಸ ಪ್ರಕರಣ ಮತ್ತು ಸವುಕ್ಕು ಅವರ ತಾಯಿ ಎ.ಕಮಲಾ ಸಲ್ಲಿಸಿರುವ ಹೇಬಿಯಸ್ ಕಾರ್ಪಸ್ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಆಗಸ್ಟ್ 27ರಂದು ವಿಚಾರಣೆ ನಡೆಸುವ ಸಾಧ್ಯತೆ ಇದೆ.
ತಮಿಳುನಾಡು ಸರ್ಕಾರದ ಪರವಾಗಿ ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ ವಾದ ಮಂಡಿಸಿದ್ದರು. ಸವುಕ್ಕು ಅವರನ್ನು ವಕೀಲ ಬಾಲಾಜಿ ಶ್ರೀನಿವಾಸನ್ ಪ್ರತನಿಧಿಸಿದ್ದರು.