ಧಾರವಾಡದಲ್ಲಿ ಜನವರಿ 21 ರಂದು 20 ವರ್ಷದ ಝಾಕೀಯಾ ಮುಲ್ಲಾ ಎಂಬ ಯುವತಿ ಶವವಾಗಿ ಪತ್ತೆಯಾಗಿರುವ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಪ್ಯಾರಾ ಮೆಡಿಕಲ್ ಮುಗಿಸಿ ಉದ್ಯೋಗದ ನಿರೀಕ್ಷೆಯಲ್ಲಿದ್ದ ಝಾಕೀಯಾ ಕೊಲೆಯಾಗುವ ಮುನ್ನ ಅಂದರೆ ಮಂಗಳವಾರದಂದು ತನ್ನ ಮನೆಯವರಿಗೆ ಲ್ಯಾಬ್‌ಗೆ ಜೋಗಿ ಬರುವುದಾಗಿ ಹೇಳಿ, ಆಚ್ಚೆ ಬಂದಿದ್ದಳಂತೆ. ಝಾಕೀಯಾ ಹಾಗೂ ಮದುವೆಯಾಗಬೇಕಿದ್ದ ಸಾಬೀರ ಜತೆಗೆ ಹೋಗಿದ್ದಳು. ಆದರೆ ಸಂಜೆಯಾದ್ರೂ ಮನೆ ಮಗಳು ಝಾಕೀಯಾ ಮನೆಗೆ ಬಂದಿಲ್ಲ.
ಮನೆಯವರು ಹಾಗೂ ಮದುವೆ ಮಾಡಿಕೊಳ್ಳಬೇಕಿದ್ದ ಯುವಕ ಸಾಬೀರ ಮುಲ್ಲಾ ಸೇರಿ ಧಾರವಾಡ ಶಹರ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಶಹರ ಠಾಣೆಯ ಪೊಲೀಸರು ಯುವತಿಯ ಮೊಬೈಲ ನಂಬರ್ ಟ್ರ್ಯಾಕ್ ಹಾಕಿ ಪತ್ತೆಗೆ ಮುಂದಾಗಿದ್ದಾರೆ. ಆಗ ಯುವತಿಯ ಮೊಬೈಲ್ ಝಾಕೀಯಾ ಶವವಾಗಿ ಬಿದ್ದ ಸ್ಥಳ ತೋರಿದೆ.
ಧಾರವಾಡ ಗ್ರಾಮೀಣ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಯುವತಿ ಶವ ನೋಡಿದ ಶಹರ ಠಾಣೆಯ ಪೊಲೀಸರು, ಗ್ರಾಮೀಣ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಆಗಮಿಸಿದ ಗ್ರಾಮೀಣ ಠಾಣೆಯ ಪೊಲೀಸರು ಯುವತಿಯ ಕುಟುಂಬಸ್ಥರನ್ನು ಸ್ಥಳಕ್ಕೆ ಕರೆಯಿಸಿ ಯುವತಿಯನ್ನು ಗುರುತ್ತಿಸಿದ್ದಾರೆ. ಯುವತಿಯ ಶವ ಪತ್ತೆಯಾದ ಇಪ್ಪತ್ತನಾಲ್ಕು ಗಂಟೆಯಲ್ಲಿಯೇ ಅಸಲಿ ಕೊಲೆಗಾರ ಸಾಬೀರನನ್ನು ಪತ್ತೆ ಮಾಡಿದ್ದಾರೆ.
ಗ್ರಾಮೀಣ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕೊಲೆಯ ಆರೋಪಿ ಪತ್ತೆಗೆ ಮುಂದಾಗಿದ್ದರು. ಎಲ್ಲ ಆಯಾಮದ ಕುರಿತು ತನಿಖೆ ಕೈಗೊಂಡ ವೇಳೆ ಝಾಕೀಯಾ ಮದುವೆಯಾಗಬೇಕಿದ್ದ ಸಾಬೀರ ಮುಲ್ಲಾ ಮೇಲೆ ಅನುಮಾನ ಮೂಡಿದೆ. ಕೂಡಲೇ ವಶಕ್ಕೆ ಪಡೆದು ವಿಚಾರಣೆ ವೇಳೆ ಸತ್ಯ ಬೆಳಕಿಗೆ ಬಂದಿದೆ. ಯುವತಿಯ ಹತ್ಯೆ ಮಾಡಿ ಪೊಲೀಸರ ತನಿಖೆ ದಾರಿ ತಪ್ಪಿಸಲು ಯುವತಿಯ ಭಾವಿ ಸಾಬೀರ್ ಆರೋಪಿ ಎಂದು ಎಂಬುವುದು ತನಿಖೆಯಿಂದ ಬಯಲಾಗಿದೆ.


