ಕ್ರೈಂ ಸ್ಟೋರಿ

14ನೇ ಮಹಡಿಯಿಂದ ಜಿಗಿದು ಯುವತಿ ಸೂಸೈಡ್​

ಮುಂಬೈ: 20 ವರ್ಷದ ಯುವತಿಯೊಬ್ಬಳು 14ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುಂಬೈನ ದಾದರ್ ಪ್ರದೇಶದಲ್ಲಿ ನಡೆದಿದೆ. ಬಿ.ಕಾಂ. ವಿದ್ಯಾರ್ಥಿನಿ ಝಾನಾ ಸೇಥಿಯಾ(20) ಮೃತ ಯುವತಿ.

ಝಾನಾ, ಹಿಂದೂ ಕಾಲೋನಿಯ ಟೆಕ್ನೋ ಹೈಟ್ಸ್ ಕಟ್ಟಡದ ಎಂಟನೇ ಮಹಡಿಯಲ್ಲಿ ಹೆತ್ತವರೊಂದಿಗೆ ವಾಸಿಸುತ್ತಿದ್ದಳು. ಪ್ರತಿದಿನ ಆಕೆ, ಇಬ್ಬರು ಸ್ನೇಹಿತರೊಂದಿಗೆ 14ನೇ ಮಹಡಿಯಲ್ಲಿರುವ ಟೆರೇಸ್‌ಗೆ ತೆರಳುತ್ತಿದ್ದಳು. ಮಂಗಳವಾರ ಸಂಜೆಯೂ ಸಹ ಸ್ನೇಹಿತರೊಂದಿಗೆ ಟೆರೇಸ್‌ಗೆ ತೆರಳಿದ್ದಳು. ಈ ವೇಳೆ ಝಾನಾ ಟೆರೇಸ್‌ನಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಸ್ಪತ್ರೆಗೆ ಕರೆದೊಯ್ದ ವೇಳೆ ಆಕೆ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಡೈರಿಯಲ್ಲಿ ಆತ್ಮಹತ್ಯೆ ಆಲೋಚನೆಗಳ ಬಗ್ಗೆ ಆಕೆ ಬರೆದುಕೊಂಡಿರುವುದು ತಿಳಿದುಬಂದಿದೆ ಎಂದು ಮಾಹಿತಿ ನೀಡಿದ್ದಾರೆ

ಪ್ರೇಮ ವೈಫಲ್ಯದಿಂದ ಆಕೆ ಖಿನ್ನತೆಗೆ ಒಳಗಾಗಿದ್ದಳು ಎಂದು ಸ್ನೇಹಿತರು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಮಟುಂಗಾ ಪೊಲೀಸ್ ಠಾಣೆಯಲ್ಲಿ) ಆಕಸ್ಮಿಕ ಸಾವಿನ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Comments (0)

Your email address will not be published. Required fields are marked *

Back to top button