ರಾಜ್ಯ

ಮೀನು ಹಿಡಿಯಲು ಹೋಗಿ ಜೀವ ಕಳಕೊಂಡ ಯುವಕ,ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

ಬೆಳಗಾವಿ:  ಮೀನು ಹಿಡಿಯಲು ಹೋಗಿ ಮೀನಿನ ಬಲೆಗೆ ಸಿಲುಕಿ ನದಿಯಲ್ಲಿ ಯುವಕ ನೀರಿನಲ್ಲಿ ಮುಳುಗಿ ಜೀವ ಕಳೆದುಕೊಂಡ  ಘಟನೆ ಬೆಳಂ ಬೆಳಿಗ್ಗೆ ಸತ್ತಿ ಗ್ರಾಮದಲ್ಲಿ ಘಟನೆ ನಡೆದಿದೆ..

ಅಥಣಿ ತಾಲೂಕಿನ  ಹಳ್ಯಾಳ ಗ್ರಾಮದ ಮಹಾಂತೇಶ ದುರ್ಗಪ್ಪ ಕರಕರಮುಂಡಿ (35) ಮೃತ ದುರ್ದೈವಿ . ಮೃತ ಮಹಾಂತೇಶ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಮೀನುಗಾರಿಕೆ ವೃತ್ತಿ ಮಾಡುತ್ತಿದ್ದ ಮಹಾಂತೇಶ  ಎಂದಿನಂತೆ ಇಂದು ಬೆಳಿಗ್ಗೆ ಸತ್ತಿ ಗ್ರಾಮದ ಹೊರವಲಯದ  ಕೃಷ್ಣ ನದಿಯಲ್ಲಿ ಮೀನು ಹಿಡಿಯಲು ಹೋಗಿದ್ದನು.  ಮಹಾಂತೇಶ ಮೀನಿಗೆ ಬಲೆ ಹಾಕುವ ವೇಳೆ ಕಾಲಿಗೆ ಬಲೆ ಸಿಲುಕಿ ನೀರಲ್ಲಿ ಮುಳುಗಿ ಸಾವಿಗೀಡಾಗಿದ್ದಾನೆ. ಸ್ಥಳೀಯರ ಸಹಾಯದಿಂದ ಮೃತ ದೇಹ ಹೊರತೆಗೆಯಲಾಗಿದೆ. ಸಧ್ಯ  ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಾಗಿದೆ.

Comments (0)

Your email address will not be published. Required fields are marked *

Back to top button