ಸುದ್ದಿ

ನೆಟ್ಟಾರು ಹತ್ಯೆ ಆರೋಪಿಗೆ ಮುತ್ತಿಟ್ಟ ಯುವಕ..!

ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ರಾಜ್ಯ ಮಾತ್ರವಲ್ಲದೇ ಇಡೀ ದೇಶದಲ್ಲೇ ಭಾರೀ ಸಂಚಲನ ಮೂಡಿಸಿತ್ತು. 2022ರ ಜುಲೈ 26ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸುಮಾರು 20ಕ್ಕೂ ಹೆಚ್ಚು ಆರೋಪಿಗಳನ್ನು ಎನ್‌ಐಎ ತಂಡ ಬಂಧಿಸಿದೆ. ಇನ್ನು ಈ ಕೇಸ್‌ನ ಮಾಸ್ಟರ್‌ ಮೈಂಡ್‌ ಎಸ್‌ಡಿಪಿಐ ಮುಖಂಡ ಇಸ್ಮಾಯಿಲ್‌ ಶಾಫಿ ಬೆಳ್ಳಾರೆ ಸಹ ಕಾರಾಗೃಹದಲ್ಲಿದ್ದರು.

ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣದ ಮಾಸ್ಟರ್ ಮೈಂಡ್ ಶಾಫಿ ಬೆಳ್ಳಾರೆಯನ್ನು 2017ರಲ್ಲಿ ಆರ್.ಎಸ್.ಎಸ್ ಹಾಗೂ ಕಲ್ಲಡ್ಕ ಭಟ್ ವಿರುದ್ಧ ಭಾಷಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ದಕ್ಷಿಣ ಕನ್ನಡದ ಬೆಳ್ತಂಗಡಿ ಕೋರ್ಟ್‌‌ಗೆ ಹಾಜರು ಪಡಿಸಲಾಗಿತ್ತು. ಈ ವೇಳೆ ಶಾಫಿ ಬೆಳ್ಳಾರೆಗೆ ಯುವಕನೋರ್ವ ಮುತ್ತಿಟ್ಟಿದ್ದಾನೆ.

ಹತ್ಯೆ ಪ್ರಕರಣದ ಮಾಸ್ಟರ್ ಮೈಂಡ್ ಶಾಫಿ ಬೆಳ್ಳಾರೆ ಆಗಿದ್ದನು. ಇಂದು ಈ ವ್ಯಕ್ತಿಯನ್ನ ಬೆಳ್ತಂಗಡಿ ನ್ಯಾಯಾಲಯದ ಆವರಣದಲ್ಲಿ ಪೊಲೀಸರ ಭದ್ರತೆಯಲ್ಲಿ ಕರೆತರಲಾಗುತ್ತಿತ್ತು. ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಾರಾಗೃಹದಲ್ಲಿದ್ದ ಶಾಫಿ ಬೆಳ್ಳಾರೆಯನ್ನು 2017ರಲ್ಲಿ ಆರ್.ಎಸ್.ಎಸ್ ಹಾಗೂ ಕಲ್ಲಡ್ಕ ಭಟ್ ವಿರುದ್ಧ ಭಾಷಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಇಂದು ಬೆಳ್ತಂಗಡಿ ಕೋರ್ಟ್‌ಗೆ ಹಾಜರು ಪಡಿಸಿದ್ದರು. ಈ ವೇಳೆ ಯುವಕನೋರ್ವ ಕೊಲೆ ಆರೋಪಿ ಶಾಫಿ ಬೆಳ್ಳಾರೆಗೆ ಮುತ್ತಿಟ್ಟಿದ್ದಾನೆ.

Comments (0)

Your email address will not be published. Required fields are marked *

Back to top button