ಕ್ರೈಂ ಸ್ಟೋರಿ
ಯುವ ಉದ್ಯಮಿ ಕೊಲೆ ಕೇಸ್; ಅತ್ತೆಯಿಂದಲೇ ಬಿತ್ತು ಅಳಿಯನ ಹೆಣ

ಬೆಂಗಳೂರು: ಹೆಸರಘಟ್ಟ ಬಳಿ ಬಿಜಿಎಸ್ ಲೇಔಟ್ ಬಳಿ ನಡೆದ ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಹೆಣ್ಣು ಕೊಟ್ಟ ಅತ್ತೆಯೇ ತನ್ನ ಅಳಿಯನನ್ನು ಕೊಲೆಗೈದ ವಿಚಾರ ಪೊಲೀಸರ ತನಿಖೆ ವೇಳೆ ಬಯಲಾಗಿದೆ.
ಯುವ ಉದ್ಯಮಿ ಲೋಕನಾಥ್ ಸಿಂಗ್ ಮಾ.22ರಂದು ಕೊಲೆಯಾಗಿದ್ದರು. ಮೇಲ್ನೋಟಕ್ಕೆ ದುಷ್ಕರ್ಮಿಗಳು ಕೊಲೆ ಮಾಡಿರಬಹುದು ಎಂಬ ಅನುಮಾನ ವ್ಯಕ್ತವಾಗಿತ್ತು. ಆದರೆ ಸ್ವಂತ ಅತ್ತೆಯೇ ಅಳಿಯನನ್ನು ಕೊಲೆ ಮಾಡಿರುವುದು ತನಿಖೆ ವೇಳೆ ಬಹಿರಂಗಗೊಂಡಿದೆ
ಕಳೆದ ಡಿಸೆಂಬರ್‌ನಲ್ಲಿ ರಿಯಲ್ ಎಸ್ಟೆಟ್ ಉದ್ಯಮಿಯೊಬ್ಬರ ಮಗಳಿಗೆ ಬ್ಲಾಕ್‌ಮೇಲ್ ಮಾಡಿ ಲೋಕನಾಥ್ ಮದುವೆ ಮಾಡಿಕೊಂಡಿದ್ದರು. ಮಗಳ ಭವಿಷ್ಯ, ಹಾಗೂ ಕುಟುಂಬದ ಮರ್ಯಾದೆಗೆ ಅಂಜಿ ಯುವತಿಯ ತಂದೆ-ತಾಯಿ ಮಗಳನ್ನು ಮದುವೆ ಮಾಡಿಕೊಡುತ್ತಾರೆ. ಇದರಿಂದ ನೊಂದ ತಂದೆ, ತಾಯಿ ಇವನಿಗೆ ಒಂದು ಗತಿ ಕಾಣಿಸಬೇಕು ಎಂದು ಸಂಚು ರೂಪಿಸಿದ್ದರು. ಸದ್ಯ ಸೋಲದೇವನಹಳ್ಳಿ ಪೋಲಿಸರು ಕಿರಾತಕಿ ತಾಯಿ-ಮಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.




