ಕ್ರಿಕೆಟ್ದೇಶ/ವಿದೇಶಸುದ್ದಿ

“ಸಚಿನ್ ತೆಂಡೂಲ್ಕರ್ ಅವರನ್ನು ತಂಡದಿಂದ ಕೈಬಿಡಲು ಮುಂದಾಗಿದ್ದ ಬಿಸಿಸಿಐ!”: ಮಾಜಿ ಆಯ್ಕೆಗಾರನ ಸ್ಫೋಟಕ ಮಾಹಿತಿ

ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ನಿವೃತ್ತಿಯ ಬಗ್ಗೆ ಬಿಸಿಸಿಐನ ಮಾಜಿ ಮುಖ್ಯ ಆಯ್ಕೆದಾರ ಸಂದೀಪ್ ಪಾಟೀಲ್ ಆಘಾತಕಾರಿ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ. ಸಚಿನ್ ಅವರನ್ನು ನಿವೃತ್ತಿ ಹೊಂದುವ ಒಂದು ವರ್ಷ ಮೊದಲು ತಂಡದಿಂದ ತೆಗೆದುಹಾಕುವ ಬಗ್ಗೆ ಚರ್ಚೆಗಳು ನಡೆದಿದ್ದವು ಎಂದು ಸಂದೀಪ್ ಪಾಟೀಲ್ ಬಹಿರಂಗಪಡಿಸಿದ್ದಾರೆ.

2012 ರಲ್ಲಿಯೇ ಸಚಿನ್ ಅವರ ಬದಲಿ ಆಟಗಾರನನ್ನು ಹುಡುಕಲು ತಂಡವು ಪ್ರಯತ್ನಿಸಲು ಪ್ರಾರಂಭಿಸಿತ್ತು. ನಿವೃತ್ತಿ ಹೊಂದುವ ಒಂದು ವರ್ಷದ ಮೊದಲು ಸಚಿನ್ ಅವರಿಗೆ ದೂರವಾಣಿ ಕರೆ ಮಾಡಿ ಈ ವಿಷಯದ ಬಗ್ಗೆ ಚರ್ಚಿಸಿದ್ದೆ ಎಂದು ಅವರು ಹೇಳಿದ್ದಾರೆ.

೨೦೧೨ ಸಚಿನ್ ಪಾಲಿಗೆ ಕೆಟ್ಟ ವರ್ಷವಾಗಿತ್ತು. ಒಂಬತ್ತು ಟೆಸ್ಟ್ ಪಂದ್ಯಗಳಲ್ಲಿ ಸಚಿನ್ ಸರಾಸರಿ ಕೇವಲ ೨೩.೮೦ ಆಗಿತ್ತು. ಆ ಸಮಯದಲ್ಲಿ ಸಚಿನ್ ಬ್ಯಾಟ್ ನಿಂದ ಒಂದೇ ಒಂದು ಶತಕ ಗಳಿಸಲಾಗಿಲ್ಲ. ೧೦ ಏಕದಿನ ಪಂದ್ಯಗಳಲ್ಲಿ ಅವರ ಸರಾಸರಿ ಕೇವಲ ೩೧.೫೦ ಆಗಿತ್ತು. ಭಾರತೀಯ ತಂಡದಿಂದ ಹೊರಬರುವ ದಾರಿ ತೆರೆದುಕೊಳ್ಳುತ್ತಿದೆ ಎಂದು ಸಚಿನ್ ಗೆ ತಿಳಿಸಿದಾಗ, ಆಟಗಾರ ಆಘಾತಕ್ಕೊಳಗಾಗಿದ್ದ ಎಂದು ಸಂದೀಪ್ ಹೇಳುತ್ತಾರೆ.

“ನಾನು ಸಚಿನ್ ತೆಂಡೂಲ್ಕರ್ ಅವರಿಗೆ ಕರೆ ಮಾಡಿ, ಅವರನ್ನು ಭಾರತ ತಂಡದಿಂದ ತೆಗೆದುಹಾಕುವ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದು ಹೇಳಿದ್ದೆ. ಯೋಜನೆ ಏನು ಎಂದು ನಾನು ಅವರನ್ನು ಕೇಳಿದೆ. ನಾನು ಈಗ ಯಾಕೆ ಅಂತಹ ಪ್ರಶ್ನೆ ಕೇಳುತ್ತಿದ್ದೇನೆ ಎಂದು ಅವರು ನನ್ನನ್ನು ಕೇಳಿದರು. ಆಯ್ಕೆ ಸಮಿತಿಯು ಅವರ ಬದಲಿ ಆಟಗಾರನನ್ನು ಹುಡುಕುತ್ತಿದೆ ಎಂದು ನಾನು ಅವರಿಗೆ ಹೇಳಿದೆ. ಇದನ್ನು ತಿಳಿದು ಅವರು ಆಘಾತಕ್ಕೊಳಗಾದರು” ಎಂದು ಸಂದೀಪ್ ಪಾಟೀಲ್ ಹೇಳಿದರು.

ಸ್ವಲ್ಪ ಸಮಯದ ನಂತರ, ಸಚಿನ್ ಮತ್ತೆ ನನಗೆ ಕರೆ ಮಾಡಿ, ನಾನು ಗಂಭೀರವಾಗಿ ಹೇಳುತ್ತೀಯಾ ಎಂದು ಕೇಳಿದರು. ನಾನು ಹೌದು ಎಂದು ಉತ್ತರಿಸಿದೆ. ಸಚಿನ್ ತಂಡದಲ್ಲಿ ಮುಂದುವರಿಯಲು ಬಯಸುವುದಾಗಿ ಹೇಳಿದರು. ಈ ಮಾಹಿತಿಯನ್ನು ಆಯ್ಕೆ ಸಮಿತಿಗೆ ತಿಳಿಸಲಾಗಿದೆ ಮತ್ತು ಅವರು ಅದನ್ನು ಸ್ವೀಕರಿಸಿದ್ದಾರೆ ಎಂದು ಸಂದೀಪ್ ಪಾಟೀಲ್ ಹೇಳಿದರು.

Comments (0)

Your email address will not be published. Required fields are marked *

Back to top button