Top Newsರಾಜಕೀಯರಾಜ್ಯ

ವಿಜಯೇಂದ್ರ ನಕಲಿ ನೊಟೀಸ್ ಮಾಡಿಸಿ ತೋರಿಸಿದ್ದಾನೆ: ಯತ್ನಾಳ್ ಹೊಸ ಬಾಂಬ್

ದೆಹಲಿ: ಸ್ವಪಕ್ಷೀಯರ ವಿರುದ್ಧವೇ ನಿರಂತರವಾಗಿ ವಾಗ್ದಾಳಿ ನಡೆಸುತ್ತಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಮಗೆ ಶಿಸ್ತು ಸಮಿತಿ ನೊಟೀಸ್ ಬಂದಿರುವ ಬಗ್ಗೆ ಹೊಸ ವರಸೆ ತೆಗೆದಿರುವನ್ನೆ ಹೇಳಿರುವ ಯತ್ನಾಳ್, ವಿಜಯೇಂದ್ರನೇ ನಕಲಿ ನೊಟೀಸ್ ಮಾಡಿಸಿದ್ದಾನೆ ಎಂದು ಆರೋಪಿಸಿದ್ದಾರೆ.

“ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಯತ್ನಾಳ್ ಮಾತನಾಡಿದ ಅವರು, ನನಗೆ ಈ ವರೆಗೂ ಅಧಿಕೃತವಾಗಿ ಪಕ್ಷದ ಕೇಂದ್ರ ಸಮಿತಿಯಿಂದ ನೊಟೀಸ್ ಬಂದಿಲ್ಲ, ವಾಟ್ಸ್ ಆಪ್ ನಲ್ಲಿ ನೊಟೀಸ್ ಬಂದಿದೆ. ವಾಟ್ಸ್ ಆಪ್ ನಲ್ಲಿ ಬಂದಿರುವುದನ್ನು ಹೇಗೆ ನಂಬಲಿ? ವಿಜಯೇಂದ್ರನೇ ನಕಲಿ ನೊಟೀಸ್ ಮಾಡಿಸಿ ಅಂಚುಚಿತ್ತಿದ್ದಾನೆ ಎನಿಸುತ್ತಿದೆ. ಅಧಿಕೃತವಾಗಿ ನೊಟೀಸ್ ಬಂದ ಬಳಿಕ ಸರಿಯಾದ ಉತ್ತರ ನೀಡುತ್ತೇನೆ” ಎಂದು ಹೇಳಿದ್ದಾರೆ.

ಇದೇ ವೇಳೆ ಯಡಿಯೂರಪ್ಪ, ವಿಜಯೇಂದ್ರ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಯತ್ನಾಳ್, ನಾನು ಸ್ವಂತ ಸಾಮರ್ಥ್ಯದ ಮೇಲೆ ನಾಯಕನಾಗಿದ್ದೇನೆ ಮತ್ತು ಮೇಲೆ ಬಂದವನು. ಯಡಿಯೂರಪ್ಪ ಭಯದಿಂದ ವಿಜಯೇಂದ್ರನನ್ನು ರಾಜ್ಯಾಧ್ಯಕ್ಷನನ್ನಾಗಿ ಮಾಡಿದ್ದಾರೆ, ವಿಜಯೇಂದ್ರ ಇನ್ನೂ ಸಣ್ಣ ಹುಡುಗ ಎಂದು ಟೀಕಾ ಪ್ರಹಾರವಾಗಿ ಆರೋಪಿಸಿದ್ದಾರೆ.

ನೊಟೀಸ್ ಸಂಬಂಧ ನಾನು ಯಾವುದೇ ಹೈಕಮಾಂಡ್ ನಾಯಕರನ್ನೂ ಭೇಟಿ ಮಾಡುವುದಿಲ್ಲ ಎಂದು ಯತ್ನಾಳ್ ಸ್ಪಷ್ಟನೆ ನೀಡಿದ್ದಾರೆ. ನನಗೆ ಬಂದಿರುವ ನೊಟೀಸ್ ನಕಲಿ ಎಂದೆನಿಸುತ್ತಿದೆ. ವಿಜಯೇಂದ್ರ ಅವರಪ್ಪನ ಸಹಿ ಮಾಡಿ ಕಡತಗಳನ್ನು ರವಾನಿಸಿರುವ ಉದಾಹರಣೆಗಳಿವೆ. ಈ ಬಗ್ಗೆ ಹರಿಪ್ರಸಾದ್ ಆರೋಪ ಮಾಡಿದ್ದರು ಎಂದು ಯತ್ನಾಳ್ ಹೊಸ ಆರೋಪ ಮಾಡಿದ್ದಾರೆ.

Comments (0)

Your email address will not be published. Required fields are marked *

Back to top button