ರಾಜಕೀಯರಾಜ್ಯ

ಬಿಜೆಪಿ ಕೇಂದ್ರ ಶಿಸ್ತು ಸಮಿತಿ ನೋಟಿಸ್ ಗೆ ಯತ್ನಾಳ್ ಖಡಕ್ ಉತ್ತರ

ಬೆಂಗಳೂರು: ಬಿಜೆಪಿ ರಾಜ್ಯಧ್ಯಕ್ಷ ಸ್ಥಾನದಿಂದ ಬಿ.ವೈ.ವಿಜಯೇಂದ್ರ ಅವರನ್ನ ಕೇಳಗಿಳಿಸಬೇಕು ಎಂದು ಭಿನ್ನಮತೀಯರ ಗುಂಪು ಕಟ್ಟಿಕೊಂಡು ದೆಹಲಿ ಯಾತ್ರೆ ನಡೆಸಿದ್ದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ಬಿಜೆಪಿ ಹೈ ಕಮಾಂಡ್ ಶಾಕ್ ನೀಡಿತ್ತು.

ಕೇಂದ್ರ ಶಿಸ್ತು ಸಮಿತಿ ಯತ್ನಾಳ್ ಗೆ ನೋಟಿಸ್ ನೀಡಿ 72 ಗಂಟೆಗಳಲ್ಲಿ ಉತ್ತರ ನೀಡುವಂತೆ ಸೂಚಿಸಿತ್ತು. ಈ ಬೆನ್ನಲ್ಲೇ ಯತ್ನಾಳ್ ಯಾವ ನೋಟಿಸ್ ಗೂ ಉತ್ತರ ನೀಡುವುದಿಲ್ಲ ಎಂದು ಜರಿದಿದ್ದರು.

ಉತ್ತರಿಸದಿದ್ದರೇ ಶಿಸ್ತು ಕ್ರಮ ಫಿಕ್ಸ್..!

ಬಿಜೆಪಿ ಆಂತರಿಕ ವಿಚಾರಗಳನ್ನು ಬಹಿರಂಗವಾಗಿ ಮಾತನಾಡ್ತಿದ್ದ ಯತ್ನಾಳ್ ಗೆ ಬಿಜೆಪಿ ನೋಟಿಸ್ ನೀಡಿ ಉತ್ತರಿಸುವಂತೆ ಸೂಚಿಸಿತ್ತು. ಇಲ್ಲದಿದ್ದರೇ ಶಿಸ್ತು ಕ್ರಮಕೈಗೊಳ್ಳುವುದಾಗಿ ಹೈಕಮಾಂಡ್ ಯತ್ನಾಳ್ ಗೆ ಎಚ್ಚರಿಕೆ ನೀಡಿತ್ತು. ಈ ಬೆನ್ನಲ್ಲೇ ಯತ್ನಾಳ್ ಇದೀಗ ಕೆಲ ಪ್ರಮುಖರ ಜೊತೆ ಚರ್ಚಿಸಿ ಐದು ಪುಟಗಳ ಉತ್ತರ ನೀಡಿದ್ದಾರೆ ಎಂದು ಹೇಳಲಾಗಿದೆ.

 

Comments (0)

Your email address will not be published. Required fields are marked *

Back to top button