ಮನರಂಜನೆರಾಜ್ಯಸಿನಿಮಾಹಣಕಾಸು

ಯಶ್ ಅಭಿನಯದ ‘ಟಾಕ್ಸಿಕ್’ ವರ್ಸಸ್ ‘ಧುರಂಧರ್ 2’ ಕ್ಲ್ಯಾಶ್!

ಮಾರ್ಚ್ 19ಕ್ಕೆ ಮಹಾ ಸಮರ; ಯಶ್ ಅಭಿನಯದ ‘ಟಾಕ್ಸಿಕ್’ ವರ್ಸಸ್ ‘ಧುರಂಧರ್ 2’ ಕ್ಲ್ಯಾಶ್!

ಸ್ಯಾಂಡಲ್‌ವುಡ್‌ನ ‘ರಾಕಿಂಗ್ ಸ್ಟಾರ್’ ಯಶ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಟಾಕ್ಸಿಕ್’ ಮತ್ತು ಬಾಲಿವುಡ್‌ನ ‘ಧುರಂಧರ್ 2’ ನಡುವೆ ಈ ವರ್ಷದ ಮಾರ್ಚ್ 19ರಂದು ಬಾಕ್ಸ್ ಆಫೀಸ್‌ನಲ್ಲಿ ಭಾರೀ ಕಾಂಪಿಟೇಷನ್ ಏರ್ಪಡುವ ಲಕ್ಷಣಗಳು ಕಾಣಿಸುತ್ತಿವೆ. ಈ ಎರಡು ಬಹುಕೋಟಿ ಬಜೆಟ್‌ನ ಚಿತ್ರಗಳ ನಡುವಿನ ಪೈಪೋಟಿ ಸಿನಿಮಾ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ.

ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಘೋಷಣೆಯಾದ ದಿನದಿಂದಲೂ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇದರ ಟೀಸರ್ ಈಗಾಗಲೇ ಅಂತರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಮೂಡಿಸಿದ್ದು, ಚಿತ್ರಕ್ಕೆ ಸಿಕ್ಕಿರುವ ಹೈಪ್ ಗಗನಕ್ಕೇರಿದೆ. ಕನ್ನಡ ಮಾತ್ರವಲ್ಲದೆ ಪರಭಾಷೆಗಳಲ್ಲೂ ಈ ಚಿತ್ರಕ್ಕೆ ದೊಡ್ಡ ಮಾರುಕಟ್ಟೆ ಸೃಷ್ಟಿಯಾಗಿದೆ.

ಸಾವಿರ ಕೋಟಿ ರೂಪಾಯಿಗಳಿಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿದ್ದ ‘ಧುರಂಧರ್’ ಚಿತ್ರದ ಸೀಕ್ವೆಲ್ ‘ಧುರಂಧರ್ 2’ ಕೂಡ ಸಿದ್ಧವಾಗುತ್ತಿದೆ. ಈ ಹಿಂದೆ ಮೊದಲ ಭಾಗವು ಚಿತ್ರಮಂದಿರಗಳಲ್ಲಿ ಕೇವಲ ಹಿಂದಿಯಲ್ಲಿ ಮಾತ್ರ ಬಿಡುಗಡೆಯಾಗಿತ್ತು. ಆ ಸಮಯದಲ್ಲಿ ಕನ್ನಡ ಅವತರಣಿಕೆ ಇಲ್ಲದ್ದಕ್ಕೆ ಕನ್ನಡಿಗರಿಂದ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಆದರೆ, ಈ ಬಾರಿ ಈ ತಪ್ಪನ್ನು ತಿದ್ದಿಕೊಳ್ಳಲು ನಿರ್ದೇಶಕ ಆದಿತ್ಯ ಧಾರ್ ಮುಂದಾಗಿದ್ದಾರೆ.

‘ಟಾಕ್ಸಿಕ್’ ಚಿತ್ರದ ಮಾರುಕಟ್ಟೆಗೆ ಸೆಡ್ಡು ಹೊಡೆಯಲು ‘ಧುರಂಧರ್ 2’ ಚಿತ್ರವನ್ನು ನೇರವಾಗಿ ಕನ್ನಡದಲ್ಲೇ ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದೆ. ಕರ್ನಾಟಕದಲ್ಲಿ ಯಶ್ ಅವರ ಮಾರುಕಟ್ಟೆಯನ್ನು ತನ್ನತ್ತ ಸೆಳೆದುಕೊಳ್ಳುವ ತಂತ್ರವನ್ನು ಬಾಲಿವುಡ್ ತಂಡ ರೂಪಿಸಿದೆ. ಕನ್ನಡ ಪ್ರೇಕ್ಷಕರನ್ನು ಸೆಳೆಯುವ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಲಾಭ ಮಾಡುವ ಉದ್ದೇಶ ನಿರ್ದೇಶಕರದ್ದಾಗಿದೆ.ಕನ್ನಡದ ‘ಟಾಕ್ಸಿಕ್’ ಸೃಷ್ಟಿಸಿರುವ ಹೈಪ್ ಎದುರು ‘ಧುರಂಧರ್ 2’ ಯಾವ ರೀತಿ ಪ್ರಭಾವ ಬೀರಲಿದೆ ಎಂಬುದು ಕುತೂಹಲದ ಸಂಗತಿ. ಯಶ್ ಅವರ ಮ್ಯಾಜಿಕ್ ವರ್ಕ್ ಆಗುತ್ತಾ ಅಥವಾ ಧುರಂಧರ್ ತಂಡದ ಹೊಸ ತಂತ್ರ ಗೆಲ್ಲುತ್ತಾ ಎಂಬುದನ್ನು ಕಾದು ನೋಡಬೇಕಿದೆ.

Comments (0)

Your email address will not be published. Required fields are marked *

Back to top button