Thursday, January 29, 2026
26.8 C
Bengaluru
Google search engine
LIVE
ಮನೆ#Exclusive Newsಯುದ್ದಕ್ಕೂ ಮುನ್ನವೆ ಓಡಿಹೋಗುತ್ತಿರುವ ಅಟ್ಯಾಕ್‌ನ ಮಾಸ್ಟ‌ರ್ ಮೈಂಡ್ ಯಾಹ್ಯಾ ಸಿನ್ಮಾರ್!

ಯುದ್ದಕ್ಕೂ ಮುನ್ನವೆ ಓಡಿಹೋಗುತ್ತಿರುವ ಅಟ್ಯಾಕ್‌ನ ಮಾಸ್ಟ‌ರ್ ಮೈಂಡ್ ಯಾಹ್ಯಾ ಸಿನ್ಮಾರ್!

ಜೆರುಸಲೇಂ: ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ಸಾರ್ ಸಾವಿನ ಬಳಿಕ ಇಸ್ರೇಲಿ ರಕ್ಷಣಾ ಪಡೆಗಳು (ಐಡಿಎಫ್) ಶನಿವಾರ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ. ಈ ವಿಡಿಯೋ 2023 ಅಕ್ಟೋಬರ್ 7 ರಂದು ರೆಕಾರ್ಡ್ ಆಗಿರುವುದು ಎನ್ನಲಾಗಿದೆ. ಅಂದರೆ ದಾಳಿಯ ಮೊದಲು ಕಳೆದ ವರ್ಷ 1,200ಕ್ಕೂ ಹೆಚ್ಚು ಇಸ್ರೇಲಿ ನಾಗರಿಕರನ್ನು ಕೊಂದ ಹಾಗೂ ಇಸ್ರೇಲ್( Israel) ಮತ್ತು ಹಮಾಸ್ ನಡುವಿನ ಯುದ್ಧವನ್ನು ಹುಟ್ಟುಹಾಕಿದ ಮಾಸ್ಟರ್ ಮೈಂಡ್ ಭೂಗತ ಸುರಂಗದಲ್ಲಿ ಓಡಿಹೋಗುತ್ತಿರುವುದನ್ನು ಕಾಣಬಹುದಾಗಿದೆ.ಯಾಹ್ಯಾ ಸಿನ್ಹಾ‌ರ್ ತನ್ನ ಮಕ್ಕಳು ಮತ್ತು ಹೆಂಡತಿಯೊಂದಿಗೆ ಖಾನ್ ಯೂನಿಸ್‌ನಲ್ಲಿರುವ ಅವರ ಮನೆಯ ಕೆಳಗಿರುವ ಸುರಂಗದಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ.

 

 

ಯಾಹ್ಯಾ ಸಿನ್ಸಾ‌ರ್ ಅವರ ಖಾನ್ ಯೂನಿಸ್‌ನಲ್ಲಿರುವ ಮನೆಯ ಕೆಳಗೆ ಸುರಂಗವಿದೆ. ಹಲವು ತಿಂಗಳುಗಳ ಹಿಂದೆ ನಡೆದ ಕಾರ್ಯಾಚರಣೆಯಲ್ಲಿ ಗಾಜಾದಿಂದ ಈ ದೃಶ್ಯಾವಳಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಕ್ರೂರ ಹತ್ಯಾಕಾಂಡಕ್ಕೆ ಮುಂಚೆಯೇ ಸಿನ್ಹಾರ್ ತನ್ನ ಮತ್ತು ತಮ್ಮ ಕುಟುಂಬದ ಉಳಿವಿಗಾಗಿ ಪ್ರಯತ್ನಿಸಿರುವುದು ಇದರಿಂದ ತಿಳಿದು ಬರುತ್ತದೆ ಎಂದು ಐಡಿಎಫ್ ವಕ್ತಾರ ರಿಯರ್ ಅಡ್ಮಿರಲ್ ಡೇನಿಯಲ್ ಹಗರಿ ಹೇಳಿದರು. ಇಸ್ರೇಲಿ ಮಕ್ಕಳು, ಮಹಿಳೆಯರು ಮತ್ತು ಪುರುಷರ ಮೇಲೆ ಮಾರಣಾಂತಿಕ ದಾಳಿಗಳನ್ನು ನಡೆಸಲು ಭಯೋತ್ಪಾದಕರನ್ನು ಕಳುಹಿಸಿದ ಆತ ಹತ್ಯಾಕಾಂಡದ ಕೆಲವೆ ಗಂಟೆಗಳ ಮೊದಲು ತನ್ನ ಮತ್ತು ತನ್ನ ಕುಟುಂಬದ ಬಗ್ಗೆ ಮಾತ್ರ ಕಾಳಜಿ ವಹಿಸುತ್ತಿದ್ದಾನೆ ಎಂದು ಅವರು ಟೀಕಿಸಿದರು. ಜೀವ ಉಳಿಸಿಕೊಳ್ಳುವ ಸಮಯದಲ್ಲೂ ಸಿನ್ಮಾರ್ ಅವರು ಪತ್ನಿ $ 32,000(ಸುಮಾರು 27 ಲಕ್ಷ ರೂ.) ಮೌಲ್ಯದ ಹರ್ಮ್ಸ್ ಬಿರ್ಕಿನ್ ಹ್ಯಾಂಡ್‌ಬ್ಯಾಗ್ ಅನ್ನು ಹಿಡಿದಿರುವುದು ವಿಡಿಯೋದಲ್ಲಿ ಕಂಡುಬಂದಿದೆ ಎಂದು ಐಡಿಎಫ್ ವಕ್ತಾರ ಅವಿಚಯ್ ಅಡೇ ಹೇಳಿದ್ದಾರೆ. ಗಾಜಾ ನಿವಾಸಿಗಳಿಗೆ ಆಹಾರಕ್ಕಾಗಿ ಹಣವಿಲ್ಲದಿದ್ದರೂ, ಯಾಹ್ಯಾ ಸಿನ್ಸಾರ್‌ ಮತ್ತು ಅವರ ಹೆಂಡತಿಯ ಹಣದ ಮೇಲಿನ ವಿಶೇಷ ಪ್ರೀತಿಯನ್ನು ನಾವು ನೋಡಬಹುದು ಎಂದು ಹೇಳಿದರು. ಇಸ್ಮಾಯಿಲ್ ಹನಿಯಾ ನಂತರ ಜುಲೈನಿಂದ ಯಾಹ್ಯಾ ಸಿನ್ಸಾರ್ ಹಮಾಸ್ ಕಮಾಂಡರ್ ಆಗಿದ್ದರು. ಅಕ್ಟೋಬರ್ 17ರಂದು ರಫಾದಲ್ಲಿ ಇಸ್ರೇಲಿ ಸೈನಿಕರು ಎನ್‌ಕೌಂಟರ್‌ನಲ್ಲಿ ಅವರನ್ನು ಹತ್ಯೆ ಮಾಡಿದರು. IDF ಬಿಡುಗಡೆ ಮಾಡಿರವು ಈ ವಿಡಿಯೋ ಸಿನ್ಸಾರ್ ಸಾವಿಗೆ ಸ್ವಲ್ಪ ಮೊದಲು ರೆಕಾರ್ಡ್ ಮಾಡಿರುವುದು ಎನ್ನಲಾಗಿದೆ.

 

 

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments