ಯಾದಗಿರಿ: ವರ್ಗಾವಣೆಗಾಗಿ ಪಣತೊಟ್ಟು ಕಳೆದುಕೊಂಡಿದ್ದ ಯಾದಗಿರಿಯ PSI ಪರಶುರಾಮ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಹಿಂದೆ ಶಾಸಕ ಚೆನ್ನಾರೆಡ್ಡಿ ಹಾಗೂ ಅವರ ಪುತ್ರನ ಕಿರುಕುಳವೇ ಆತ್ಮಹತ್ಯೆಗೆ ಕಾರಣ ಎಂದು PSIಪತ್ನಿ ದೂರು ನೀಡಿದ್ದಾರೆ. ಪರಶುರಾಮ್ ಅವರು ವರ್ಗಾವಣೆಗಾಗಿ ಹಣ ಕೊಟ್ಟಿದ್ದರು. ಟ್ರಾನ್ಸ್‌ಫರ್‌ಗೆ ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಅವರ ಮಗ 30 ಲಕ್ಷ ಲಂಚ ಕೇಳಿ, ಟಾರ್ಚರ್ ಮಾಡಿದ್ದರು ಅಂತ ಪಿಎಸ್ಐ ಪರಶುರಾಮ್ ಮಾವ ಕೂಡಾ ಆರೋಪ ಮಾಡಿದ್ದಾರೆ.
ಯಾದಗಿರಿಯಲ್ಲಿ ಪಿಎಸ್ಐ ಪರಶುರಾಮ್ ಸಾವಿನ ಸುತ್ತ ಹತ್ತಾರು ಅನುಮಾನಗಳು ಹುಟ್ಟಿಕೊಂಡಿವೆ. ಪಿಎಸ್ಐ ಸಾವಿನ ಬಗ್ಗೆ ಸೂಕ್ತ ತನಿಖೆ ಆಗಬೇಕೆಂದು ವಿವಿಧ ಸಂಘಟನೆಗಳು ಒತ್ತಾಯಿಸಿವೆ. ಖಾಸಗಿ ಆಸ್ಪತ್ರೆಯಿಂದ ಶವವನ್ನ ಮರಣೋತ್ತರ ಪರೀಕ್ಷೆಗಾಗಿ ರವಾನಿಸುವಾಗ ಆಂಬ್ಯುಲೆನ್ಸ್ ತೆಡೆದು ನೂರಾರು ಜನ ಪ್ರತಿಭಟನೆ ಮಾಡಿದರು. ನನ್ನ ಗಂಡನ ಸಾವಿಗೆ ನ್ಯಾಯ ಸಿಗಬೇಕು ಅಂತ ಮೃತ ಪಿಎಸ್ಐ ಪರಶುರಾಮ್ ಪತ್ನಿ ಶ್ವೇತಾ ಎಸ್‌ಪಿ ಮುಂದೆ ಕಣ್ಣೀರು ಹಾಕಿದ್ರು.
ಕೇಸ್ ದಾಖಲಿಸಿ ತಪ್ಪಿತಸ್ಥ ಶಾಸಕ ಚನ್ನಾರೆಡ್ಡಿ ಪಾಟೀಲ್ನ ಬಂಧಿಸುವಂತೆ ಪ್ರತಿಭಟನೆ ನಿರಂತರ ಒತ್ತಾಯ ಮಾಡಿದ್ದಾರೆ.


