Top Newsಕ್ರಿಕೆಟ್

WPL ನೋಡೋಕೆ ಏನ್ ಜನ ಗುರು; ಚಿನ್ನಸ್ವಾಮಿ ಸ್ಟೇಡಿಯಂ ಫುಲ್

ಐಪಿಎಲ್​-2024 ಶುರುವಾಗಲು ಇನ್ನು ಕೆಲವೇ ದಿನ ಬಾಕಿಯಿದೆ. ಸದ್ಯ WPL- 2024 ಕ್ರೇಜ್ ಕಂಡುಬರ್ತಿದೆ. ಬೆಂಗಳೂರಲ್ಲಿ ಸೋಮವಾರ ನಡೆದ ಆರ್​ಸಿಬಿ ಮತ್ತು ಯುಪಿ ವಾರಿಯರ್ಸ್ ನಡುವಣ ಪಂದ್ಯ ನೋಡೋಕೆ ಕ್ರಿಕೆಟ್ ಅಭಿಮಾನಿಗಳು ಮುಗಿಬಿದ್ದಿದ್ರು.

ಇಡೀ ಚಿನ್ನಸ್ವಾಮಿ ಸ್ಟೇಡಿಯಂ ಹೆಚ್ಚು ಕಡಿಮೆ ಫುಲ್ ಆಗಿತ್ತು. ಐಪಿಎಲ್​ ಮ್ಯಾಚ್ ನೋಡುವಾಗ ಯಾವ ರೀತಿಯ ಕ್ರೇಜ್ ಇರುತ್ತೋ ಅದೇ ರೀತಿಯ ಕ್ರೇಜ್ ಕಂಡುಬಂತು.

ಆರ್​ಸಿಬಿಯ ಸ್ಮೃತಿ ಮಂಧಾನಾ, ಎಲ್ಲಿಸ್ ಪೆರ್ರಿ ಸೂಪರ್ ಬ್ಯಾಟಿಂಗ್​ಗೆ ಚಪ್ಪಾಳೆ, ವಿಶಲ್​ಗಳ ಸುರಿಮಳೆಯೇ ಆಯ್ತು.. ಒಂದೊಂದು ಫೋರ್, ಸಿಕ್ಸರ್​ಗೂ ಸ್ಟೇಡಿಯಂನಲ್ಲಿ ಸೇರಿದ್ದ ಕ್ರಿಕೆಟ್ ಅಭಿಮಾನಿಗಳು ಹುಚ್ಚೆದ್ದು ಸಂಭ್ರಮಿಸಿದರು.

ಆರ್​ಸಿಬಿ ಗೆದ್ದ ಕ್ಷಣವಂತೂ ಸ್ಟೇಡಿಯಂನಲ್ಲಿ ಭಾರೀ ಸಂಭ್ರಮ ಕಂಡುಬಂತು.

WPL- 2024 ಮ್ಯಾಚ್ ಎಫೆಕ್ಟ್ ಚಿನ್ನಸ್ವಾಮಿ ಅಂಗಳದ ಹೊರಗೂ ಕಂಡುಬಂತು. ರಾತ್ರಿಯಾದ್ರೂ ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಮುತ್ತ ಟ್ರಾಫಿಕ್ ಕಂಡುಬಂತು.

ಈ ದೃಶ್ಯಗಳನ್ನು ನೋಡ್ತಿದ್ರೆ ಐಪಿಎಲ್ ಮಾದರಿಯಲ್ಲೇ ಡಬ್ಲುಪಿಎಲ್ ಕೂಡ ಜನಪ್ರಿಯತೆ ಗಳಿಸಿದೆ ಎಂದೆನಿಸದೆ ಇರಲಿಲ್ಲ

 

Comments (0)

Your email address will not be published. Required fields are marked *

Back to top button