ಬೆಂಗಳೂರು: ನಾಯಕತ್ವ ವಿಚಾರದಲ್ಲಿ ಸ್ವಾಮೀಜಿಗಳು ಡಿಸಿಎಂ ಡಿ.ಕೆ ಶಿವಕುಮಾರ್ ಅವರ ಬೆಂಬಲಕ್ಕೆ ಸೂಚಿಸಿದ ಹಿನ್ನಲೆ ಸ್ವಾಮೀಜಿಗಳ ನಡೆಗೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಆಕ್ಷೇಪಿಸಿರುವ ವಿಚಾರಕ್ಕೆ ಡಿಸಿಎಂ ಡಿ.ಕೆ ಶಿವಕುಮಾರ್ ತಿರುಗೇಟು ಕೊಟ್ಟಿದ್ದಾರೆ..
ಪಾಪ ಕುಮಾರಣ್ಣನಿಗೆ ಎರಡನೇ ಮಠ ಹೇಗಾಯ್ತು. ಸ್ವಾಮೀಜಿಗಳು ಇಲ್ಲದೇ ಹೋಗಿದ್ದರೆ ಸಿಎಂ ಆಗ್ತಿದ್ರಾ ದೇವೇಗೌಡ್ರು. ಅವತ್ತು ಸ್ವಾಮೀಜಿ ರಸ್ತೆಗಿಳಿಲಿಲ್ವಾ. ಡಿವಿಎಸ್ಗೆ ತೊಂದರೆಯಾದಾಗ ಸ್ವಾಮೀಜಿ ಸುಮ್ನೆ ಕುಳಿತಿದ್ರಾ? ಕೆಲವು ಸಂದರ್ಭದಲ್ಲಿ ಸ್ವಾಮೀಜಿಗಳು ಮಾತನಾಡಿದ್ದಾರೆ ಎಂದು ಹೇಳಿದ್ದಾರೆ.
ಪಾರ್ಟಿ ಪ್ರೆಸಿಡೆಂಟ್ ಅಂದ್ರೆ ಫಾದರ್ ಇದ್ದಂಗೆ ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗಬೇಕು 140 ಜನರನ್ನ ತೆಗೆದುಕೊಂಡು ಹೋಗುವವನು. ನಾನು ಎಷ್ಟು ನಿಷ್ಠೆಯಿಂದ ಕೆಲಸ ಮಾಡಿದ್ದೇನೆ ಎಂದು ನನಗೆ, ದೇವರಿಗೆ ಮಾತ್ರ ಗೊತ್ತು. ಕುಮಾರಸ್ವಾಮಿ ಸರ್ಕಾರ ಇದ್ದಾಗಲೂ ಅಷ್ಟೇ ನಿಷ್ಠೆಯಿಂದ ಕೆಲಸ ಮಾಡಿದ್ದೇನೆ ಎಂದು ಡಿಕೆಶಿ ಟಾಂಗ್ ಕೊಟ್ಟಿದ್ದಾರೆ.
ಈಗ ಕುಮಾರಸ್ವಾಮಿ ಒಪ್ಪದೆ ಇರಬಹುದು. ಆಗ ಅವರಿಗೂ ಲಾಯಲ್ ಆಗಿ ಇದ್ದೆ. ಸರ್ಕಾರ ಉಳಿಸಬೇಕು ಎಂದು ನಿಷ್ಠೆಯಿಂದಲೇ ಕೆಲಸ ಮಾಡಿದ್ದೇನೆ. ಇದು ಅವರಿಗೂ ಹಾಗೂ ಅವರ ತಂದೆಗೂ ಗೊತ್ತಿದೆ. ಈಗ ಅವ್ರು ಏನು ಬೇಕಾದ್ರೂ ಮಾತಾಡಿಕೊಳ್ಳಲಿ, ಅದಕ್ಕೆ ನನಗೆ ಬೇಸರ ಇಲ್ಲ ಎನ್ನುತ್ತಲೇ ಕುಮಾರಸ್ವಾಮಿ ಮಾತಿಗೆ ಡಿಕೆಶಿ ತಿರುಗೇಟು ನೀಡಿದ್ದಾರೆ.
ನಾಯಕತ್ವ ಬದಲಾವಣೆ ವಿಚಾರದಲ್ಲಿ ಹೈಕಮಾಂಡ್ ಸೂಚನೆಯಂತೆ ಸಭೆ ನಡೆಸಿದ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಒಗ್ಗಟ್ಟಿನ ಪ್ರದರ್ಶನ ಮಾಡಿದ್ದಾರೆ.. ಡಿ.ಕೆ.ಶಿವಕುಮಾರ್ ನನ್ನ ಹಾಗೂ ಸಿದ್ದರಾಮಯ್ಯ ಅವರ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದಿದ್ದಾರೆ. ನಾನು ಗುಂಪುಗಾರಿಕೆ ಮಾಡಲ್ಲ. ಶಾಸಕರನ್ನ ಕರೆದುಕೊಂಡು ದೆಹಲಿಗೆ ಹೋಗೋದು ದೊಡ್ಡ ಕೆಲಸ ಅಲ್ಲ. ಅದ್ರಿಂದ ಏನು ಪ್ರಯೋಜನ ಇಲ್ಲ ಎಂದಿದ್ದಾರೆ.


