Top Newsವೈರಲ್ ನ್ಯೂಸ್ಸುದ್ದಿ

ಕಿಟಕಿಯೊಳಗೆ ನುಸುಳಿದ ಮಹಿಳೆ: ವಿಡಿಯೋ ವೈರಲ್

ಇತ್ತೀಚಿನ ದಿನಗಳಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ನೀಡಿದ ಬೆನ್ನಲ್ಲೇ ಬಸ್ಸಿನಲ್ಲಿ ಮಹಿಳೆಯರು ನಾನಾ ರೀತಿಯಲ್ಲಿ ಅವತಾರಗಳನ್ನಾಡುವ ವಿಡಿಯೋ ಸೋಶಿಯಲ್​​ ಮೀಡಿಯಾಗಳಲ್ಲಿ ವೈರಲ್​​ ಆಗುತ್ತಿರುತ್ತವೆ.

ಇದೀಗ ಅಂತದ್ದೇ ವಿಡಿಯೋ ಒಂದು ಭಾರೀ ಸದ್ದು ಮಾಡುತ್ತಿದೆ. ಈ ವಿಡಿಯೋದಲ್ಲಿ ಮಹಿಳೆಯೊಬ್ಬಳು ಬಸ್ಸಿನ ಕಿಟಕಿಯಿಂದ ಹತ್ತುತ್ತಿರುವುದು ಸೆರೆಯಾಗಿದೆ.

@ChourePrafull ಎಂಬ ಟ್ವಟಿರ್​ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ವಿಡಿಯೋ ಎಲ್ಲೆಡೆ ವೈರಲ್​​ ಆಗಿದೆ. ಆಗಸ್ಟ್​​ 14ರಂದು ಹಂಚಿಕೊಂಡಿರುವ ಈ ವಿಡಿಯೋವನ್ನು ಈಗಾಗಲೇ ಸಾವಿರಾರು ಜನರು ವೀಕ್ಷಿಸಿದ್ದಾರೆ. ಜೊತೆಗೆ ಸಾಕಷ್ಟು ನೆಟ್ಟಿಗರು ” ಫ್ರೀ ಬಸ್​​ ಎಫೆಕ್ಟ್​​​​​​” ಎಂದು ಕಾಮೆಂಟ್​​ನಲ್ಲಿ ಬರೆದಿದ್ದಾರೆ.
ವೈರಲ್​​ ಆಗಿರುವ ವಿಡಿಯೋದಲ್ಲಿ ,ಬಸ್ಸಿನಲ್ಲಿ ಸಾಕಷ್ಟು ಪ್ರಯಾಣಿಕರು ಕುಳಿತಿರುವುದನ್ನು ಕಾಣಬಹುದು. ಆದರೆ ಬಸ್​​ ಹತ್ತಲು ಬಿಡಲಿಲ್ಲ ಎಂಬ ಕಾರಣಕ್ಕೆ ಮಹಿಳೆ ಕಿಟಕಿ ಮೂಲಕ ಹತ್ತಿದ್ದಾಳೆ. ಸೀರೆಯುಟ್ಟ ಮಹಿಳೆ ಬಸ್ಸಿನ ಹಿಂಬದಿಯ ಕಿಟಿಕಿಯಿಂದ ಬಸ್ಸು ಹತ್ತುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಬಸ್ಸಿನಲ್ಲಿ ಕುಳಿತಿರುವ ಇನ್ನೊಬ್ಬ ವ್ಯಕ್ತಿಯ ಸಹಾಯ ಪಡೆದು ಮಹಿಳೆ ಬಸ್ಸು ಹತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ.

Comments (0)

Your email address will not be published. Required fields are marked *

Back to top button