ಬೆಂಗಳೂರು: ವಾಕ್ ಮಾಡುತ್ತಿದ್ದ ಮಹಿಳೆಯ ಮೇಲೆ ಅಪರಿಚಿತ ವ್ಯಕ್ತಿಯಿಂದ ಅಸಭ್ಯ ವರ್ತನೆ ಎಸಗಿರುವ ಘಟನೆ ನಡೆದಿದೆ. ನಗರದ ಕೋಣಕುಂಟೆಯಲ್ಲಿ ಎಂದಿನಂತೆ ಮಹಿಳೆ ಬೆಳಗಿನ ಜಾವ ಸುಮಾರು ಐದು ಗಂಟೆ ವೇಳೆ ವಾಕ್ ಮಾಡುತ್ತಿದ್ದು, ಮಹಿಳೆಯನ್ನು ಹಿಂಬಾಲಿಸಿ ಬಾಯಿ ಮುಚ್ಚಿ ತಬ್ಬಿ ಕಾಮುಕ ಎಳೆದಾಡಿದ್ದಾನೆ. ಮಹಿಳೆ ತಪ್ಪಿಸಿಕೊಂಡು ಓಡಲು ಯತ್ನಿಸಿದ್ರು ಬಿಡದೆ ಎಳೆದಾಡಿದ್ದಾನೆ. ಕಿರುಚುತ್ತಾ ಮಹಿಳೆ ಕಾಮುಕನ ಕೈಯಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದು, ಮಹಿಳೆ ಓಡುತಿದ್ದಂತೆ ಅಲ್ಲಿಂದ ಕಾಲ್ಕಿತ್ತು ಆರೋಪಿ ಪರಾರಿಯಾಗಿದ್ದಾನೆ.
ಸದ್ಯ ಮಹಿಳೆಯ ಮೈಮುಟ್ಟಿ ಅಸಭ್ಯವರ್ತನೆ ಮಾಡಿರುವ ವಿಡಿಯೋ ಸಾಮಾಜಿಕ Xನಲ್ಲಿ ವೈರಲ್ ಆಗುತ್ತಿದೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕೋಣಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಗೆ ಪೊಲೀಸರು ಮುಂದಾಗಿದ್ದಾರೆ.