ಬೆಂಗಳೂರು : ನಮ್ಮ ಮೆಟ್ರೋದ ಮೊದಲ ಚಾಲಕ ರಹಿತ ಟ್ರೈನ್‌ನ ಟೆಸ್ಟಿಂಗ್ ಆರಂಭ ಆಗಿದೆ. ಹೆಬ್ಬಗೋಡಿ ಡಿಪೋದಲ್ಲಿ ಬಿಎಂಆರ್ಸಿಎಲ್ ಟೆಸ್ಟಿಂಗ್ ಆರಂಭಿಸಿದೆ. ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರವರಿಗೆ ಟ್ರ್ಯಾಕ್‌ನಲ್ಲಿ ಟೆಸ್ಟ್ ಇಳಿಸುವ ಮುನ್ನ ಇಲ್ಲಿ ಪರೀಕ್ಷೆ ನಡೆಸಲಾಗ್ತಿದೆ.
ಇನ್ನು, ಈ ಮಾರ್ಗದಲ್ಲಿ ಮೆಟ್ರೋ ಸಂಚರಿಸುವ ದಿನ ಸನಿಹವಿದ್ದು, ಟಿಟಾಗರ್ ವ್ಯಾಗನ್ಸ್ ಮೂಲಕ ಈ ಮಾರ್ಗಕ್ಕಾಗಿ 216 ಕೋಚ್ಗಳು ಸಿದ್ದವಾಗಿವೆ. ಟಿಟಾಗರ್ ದ ಉತ್ಪಾದನಾ ಘಟಕದಲ್ಲಿ ಕೋಚ್ ತಯಾರು ಮಾಡ್ತಿರುವ ಚೀನಾ, ಹಲವು ಹಂತದಲ್ಲಿ ಎರಡೂವರೆ ತಿಂಗಳು ಪ್ರಾಯೋಗಿಕ ಪರೀಕ್ಷೆ ನಡೆಯುತ್ತೆ. ಇದು ಚೀನಾ-ಮಾಲೀಕತ್ವದ ಸಿಆರ್‌ಆರ್‌ಸಿ ನಾನ್‌ಜಿಂಗ್ ಪುಜೆನ್ ಕಂ. ಲಿಮಿಟೆಡ್‌ನಿಂದ ತಯಾರಿಸಲ್ಪಟ್ಟ ಮೆಟ್ರೋ ರೈಲಾಗಿದೆ.