Freedom TV desk :
ಚಳಿಗಾಲದಲ್ಲಿ ಹೆಚ್ಚಿನವರು ಆಲಸ್ಯದಿಂದಾಗಿ ವಾಕಿಂಗ್ ಮಾಡಲು ಹೋಗುವುದಿಲ್ಲ. ವಾಕಿಂಗ್ ಮಾಡುವುದು ಆರೋಗ್ಯಕ್ಕೆ ಉತ್ತಮವಾಗಿದ್ದರೂ ಚಳಿ ಇದಕ್ಕೆ ಅಡ್ಡಿಯಾಗುತ್ತದೆ.ಪ್ರತಿದಿನ ವಾಕಿಂಗ್ ಮಾಡುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎನ್ನಲಾಗಿದೆ. ನೀವು ವ್ಯಾಯಾಮ ಮಾಡದಿದ್ದರೂ ವಾಕಿಂಗ್ ಮಾಡಿದರೂ ಪ್ರಯೋಜನಗಳನ್ನು ಪಡೆಯಬಹುದು. ಚಳಿಗಾಲದಲ್ಲಿ ತಣ್ಣನೆಯ ಗಾಳಿಯಿಂದ ವ್ಯಾಯಾಮ ಅಥವಾ ಯೋಗಮಾಡಲು ಸ್ವಲ್ಪ ತೊಂದರೆಯಾಗುತ್ತದೆ, ಹಾಗಾಗಿ ಹೆಚ್ಚಿನವರುಯ ಮನೆಯಿಂದ ಹೊರಬರಲು ಇಷ್ಟಪಡುವುದಿಲ್ಲ. ಆದರೆ ನೀವು ಚಳಿಗಾಲದ ಬಟ್ಟೆಗಳನ್ನು ಧರಿಸಿ ಸರಿಯಾಗಿ ನಡೆದರೆ, ಅದು ನಿಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.

ನೀವು ಕೂಡ ಚಳಿಗಾಲದಲ್ಲಿ ನಡೆಯಲು ಯೋಚಿಸುತ್ತಿದ್ದರೆ, ಕೆಲವು ಚವಿಶೇಷ ವಿಷಯಗಳನ್ನು ನೆನಪಿನಲ್ಲಿಡಿ. ಚಳಿಗಾಲದಲ್ಲಿ ಬೆಳಿಗ್ಗೆ ಬೇಗ ಏಳಲು ಸಾಧ್ಯವಿಲ್ಲ . ವ್ಯಾಯಾಮ ಅಥವಾ ಜಿಮ್ಗೆ ಹೋಗಬೇಕೆಂದು ಅನಿಸುವುದಿಲ್ಲ. ಹೀಗಿರುವಾಗ ದೇಹವು ಆರೋಗ್ಯದಿಂದಿರಬೇಕಾದರೆ ದೈಹಿಕ ಚಟುವಟಿಕೆ ಅಗತ್ಯ. ಇಂತಹ ಸಂದರ್ಭದಲ್ಲಿ ವಾಕಿಂಗ್ ಮಾಡುವುದು ನಿಮಗೆ ಸಹಕಾರಿಯಾಗಿದೆ.

ಚಳಿಗಾಲದಲ್ಲಿ ದೈಹಿಕ ಚಟುವಟಿಕೆ, ವ್ಯಾಯಾಮ ಮಾಡದಿರುವುದರಿಂದ ತೂಕ ತುಂಬಾ ವೇಗವಾಗಿ ಹೆಚ್ಚಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ತೂಕವನ್ನು ನಿಯಂತ್ರಣದಲ್ಲಿಡಲು ಏನು ಮಾಡಬೇಕು ಡಂಬುದನ್ನು ತಿಳಿಯುವುದು ಮುಖ್ಯ. ನೀವು ಮೊದಲಿಗೆ ನಿಮ್ಮ ದೇಹವನ್ನು ಬೆಚ್ಚಗಿರಿಸುವಂತಹ ಚಳಿಗಾಲದ ಬಟ್ಟೆಗಳನ್ನು ಧರಿಸಿ ವಾಕಿಂಗ್ಗೆ ಹೋಗಬೇಕು. ಏಕೆಂದರೆ ಇದು ನಿಮ್ಮ ಹೊಟ್ಟೆಯ ಚಯಾಪಚಯ ಮತ್ತು ಮೆದುಳಿನ ಅರೋಗ್ಯದ ಮೆಲೆ ನೇರ ಪರಿಣಾಮವು ರಕ್ತ ಪರಿಚಲನೆಯ ಮೇಲೆ ಬೀಳುತ್ತದೆ.