Thursday, September 11, 2025
27.2 C
Bengaluru
Google search engine
LIVE
ಮನೆ#Exclusive Newsವರ್ತೂರು ಸಂತೋಷ್​ ಅವರು ಎರಡನೇ ಮದುವೆ ಆಗುತ್ತಾರಾ...?

ವರ್ತೂರು ಸಂತೋಷ್​ ಅವರು ಎರಡನೇ ಮದುವೆ ಆಗುತ್ತಾರಾ…?

ವರ್ತೂರು ಸಂತೋಷ್​ ಅವರು ಎರಡನೇ ಮದುವೆಗೆ ಸಿದ್ಧವಾಗಿರುವ ಬಗ್ಗೆ ಸುದ್ದಿಹರಿದಾಡುತ್ತಿದೆ.ಯೂಟ್ಯೂಬ್‌ ಚಾನೆಲ್‌ ಸಂದರ್ಶನವೊಂದರಲ್ಲಿ ತಮ್ಮ ಹುಡುಗಿ ಬಗ್ಗೆ ಮಾತನಾಡಿದ ವರ್ತೂರು ಸಂತೋಷ್‌, ‘ಹತ್ತನೇ ತರಗತಿಯಲ್ಲಿ ಕ್ರಶ್‌ ಅಥವಾ ಒನ್‌ ಸೈಡ್‌ ಪ್ರೀತಿ ಇತ್ತು. ಆಮೇಲೆ ಪಿಯುಸಿಯಲ್ಲಿಯೂ ಅದೇ ಇತ್ತು. ಆದರೆ ಈಗ ಜೀವನದಲ್ಲಿ ಪ್ರೀತಿ ಇದೆ. ಇಬ್ಬರೂ ಒಪ್ಪಿಕೊಂಡು ಪರಸ್ಪರ ಪ್ರೀತಿ ಇದೆ’ ಎಂದರು.

‘ಯಾಕೆಂದರೆ ಒಂದು ಮನುಷ್ಯ ಖಿನ್ನತೆಗೆ ಹೋದಾಗ ಅಥವಾ ಕೆಳಗೆ ಬಿದ್ದಾಗ ಒಬ್ಬರು ಜೊತೆಯಲ್ಲಿ ಬೇಕೇ ಬೇಕು. ವಯಸ್ಸಿಗೆ ಬಂದಿರುವ ಹುಡುಗ ಆಗಲಿ, ಹುಡುಗಿಯಾಗಲಿ ಖಿನ್ನತೆಗೆ ಹೋದಾಗ, ಹುಡುಗನಿಗೆ ಹುಡುಗಿ ಇದ್ದಾಗಲೇ, ಹುಡುಗಿಗೆ ಹುಡುಗ ಇದ್ದಾಗಲೇ ವಾಪಸ್ ಬರಲು ಸಾಧ್ಯ. ನಾನು ವಾಪಸ್ ಆಗಲು ಅವರೇ ಕಾರಣ. ನಾನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ನನ್ನ ತಾಯಿ ಬಿಟ್ಟರೆ ಅವರೇ ನನಗೆ ಎಲ್ಲಾ. ಆದರೆ ನಾನು ಇದನೆಲ್ಲಾ ಯಾವತ್ತೂ ಅವರಿಗೆ ಹೇಳಿಲ್ಲ. ಯಾವಾಗಲೂ ನನ್ನ ಬಗ್ಗೆನೇ ಯೋಚಿಸುತ್ತಿರುತ್ತಾರೆ. ನನ್ನ ಎರಡನೇ ಹೃದಯ ಅವರು. ಅವರ ಹತ್ತಿರ ನಾನು ಎಲ್ಲವನ್ನೂ ಹೇಳಿಕೊಳ್ಳುತ್ತೇನೆ’ ಎಂದರು.

‘ನೀನು ಇರಬೇಕಾಗಿರುವುದು ಇಲ್ಲಲ್ಲ ಎಂದು ನನ್ನ ಕಂಬ್ಯಾಕ್ ಮಾಡಿಸಿದವರು ಅವರು. ಆ ಕ್ಷಣದಲ್ಲಿ ಜೊತೆಗಿದ್ದವರನ್ನು ಯಾವತ್ತೂ ಮರೆಯಬಾರದು. ಆದರೆ ಈವರೆಗೂ ಇದನೆಲ್ಲಾ ನಾನು ಹೇಳಿಕೊಂಡಿಲ್ಲ. ಹೇಳಿಕೊಂಡರೆ ನಾವೇ ಎಲ್ಲೋ ಸಣ್ಣರಾಗುತ್ತೇವೆ ಎನ್ನುವ ಅಳುಕು. ಆದರೆ ನನ್ನ ಮನಸ್ಸಿನಲ್ಲಿ ಆಕೆ ಯಾವತ್ತೂ ಇರುತ್ತಾಳೆ. ನಾನು ವರ್ತೂರು ಸಂತೋಷ್ ಅಂತಾ ಆಗೋದಕ್ಕೂ ಮುನ್ನ ನನ್ನ ಬೆಂಬಲಕ್ಕೆ ಇದ್ದವರು ಅವರು’ ಎಂದು ಬಹಳ ಖುಷಿಯಿಂದ ಹೇಳಿಕೊಂಡಿದ್ದಾರೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments