ಬೆಂಗಳೂರು: ವಿರಾಟ್ ಕೊಹ್ಲಿ ಐಪಿಎಲ್ ಹರಾಜಿನಲ್ಲಿ ಭಾಗವಹಿಸಿಲ್ಲ: ಐಪಿಎಲ್ ಟೂರ್ನಿಗಳಲ್ಲಿ ವಿರಾಟ್ ಕೊಹ್ಲಿ ಯಾವಾಗಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮಾತ್ರ ಆಟವಾಡಿದ್ದಾರೆ. 2025 ರ ಐಪಿಎಲ್ ಮೆಗಾ ಹರಾಜು ಸಮೀಪಿಸುತ್ತಿದ್ದಂತೆ, ಕೊಹ್ಲಿಯನ್ನು ಉಳಿಸಿಕೊಳ್ಳಲಾಗುತ್ತದೆಯೇ ಅಥವಾ ಹರಾಜಿನಲ್ಲಿ ಇರಿಸಲಾಗುತ್ತದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ
ಐಪಿಎಲ್ ಟೂರ್ನಿಗಳಲ್ಲಿ ಪ್ರತಿ ತಂಡವು ಹರಾಜಿನ ಮೂಲಕ ಆಟಗಾರರನ್ನು ಆಯ್ಕೆ ಮಾಡಿಕೊಂಡು ತಮ್ಮ ತಂಡದಲ್ಲಿ ಆಡಲು ಅವಕಾಶ ನೀಡುತ್ತದೆ. ಇದು ಪ್ರತಿ ಬಾರಿಯೂ ನಡೆಯುತ್ತದೆ. ಆದರೆ, ಕೆಲವು ಆಟಗಾರರು ಮಾತ್ರ ಐಪಿಎಲ್ ಹರಾಜಿಗೆ ಬರುವುದಿಲ್ಲ. ಯಾಕೆ ಅಂತ ಯಾರಾದ್ರೂ ಯೋಚಿಸಿದ್ದೀರಾ? ಅವರಲ್ಲಿ ವಿರಾಟ್ ಕೊಹ್ಲಿ ಪ್ರಮುಖರು. ಕಳೆದ 17 ವರ್ಷಗಳಿಂದ ಒಂದೇ ತಂಡಕ್ಕೆ ಅದೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮಾತ್ರ ಆಟವಾಡುತ್ತಿದ್ದಾರೆ.
ಪ್ರತಿ ಬಾರಿ ಹರಾಜು ಬಂದಾಗ ವಿರಾಟ್ ಕೊಹ್ಲಿಯನ್ನು ಉಳಿಸಿಕೊಳ್ಳಲಾಗುತ್ತದೆ. ಐಪಿಎಲ್‌ನಲ್ಲಿ ವಿದೇಶಿ ಆಟಗಾರರಿಗಿಂತ ವಿರಾಟ್ ಕೊಹ್ಲಿಯ ಸಂಬಳ ತುಂಬಾ ಕಡಿಮೆ. ಹೀಗಿದ್ದೂ ವಿರಾಟ್ ಕೊಹ್ಲಿ ಆರ್‌ಸಿಬಿ ಪರವೇ ಆಡುತ್ತಾ ಬಂದಿದ್ದಾರೆ.ಬೆಂಗಳೂರು ಫ್ರಾಂಚೈಸಿಯು ವಿರಾಟ್ ಕೊಹ್ಲಿಗೆ 2014 ರಲ್ಲಿ 12.50 ಕೋಟಿ, 2018 ರಿಂದ 21 ರವರೆಗೆ ರೂ.17 ಕೋಟಿ, 22 ಮತ್ತು 23 ರಲ್ಲಿ ರೂ.15 ಕೋಟಿ ನೀಡಿದೆ. ಈಗ ಇದೆಲ್ಲಾ ಯಾಕೆ ಹೇಳ್ತಿದ್ದೀವಿ ಅಂದ್ರೆ 2025 ರ ಐಪಿಎಲ್ ಮೆಗಾ ಹರಾಜು ಹತ್ತಿರ ಬರ್ತಿದೆ.ಐಪಿಎಲ್ ಮೆಗಾ ಹರಾಜಿಗಾಗಿ ಈಗಾಗಲೇ ಸಿದ್ದತೆಗಳು ಆರಂಭವಾಗಿವೆ. ಈ ಹರಾಜಿನ ಮುನ್ನ ಯಾವ ಆಟಗಾರರನ್ನು ಉಳಿಸಿಕೊಳ್ಳಲಾಗುತ್ತದೆ, ಯಾರನ್ನು ಬಿಡುಗಡೆ ಮಾಡಲಾಗುತ್ತದೆ ಎಂಬ ಕುತೂಹಲ ಎಲ್ಲರ ಮನದಲ್ಲೂ ಮೂಡಿದೆ.ಪ್ರತಿ ಬಾರಿ ಐಪಿಎಲ್ ಹರಾಜು ಬಂದಾಗ ವಿರಾಟ್ ಕೊಹ್ಲಿ ಮಾತ್ರ ಹರಾಜಿಗೆ ಬರುವುದಿಲ್ಲ. ಇದಕ್ಕೆ ಕಾರಣ ಅವರ ಪ್ರತಿಭೆ ಮತ್ತು ಖ್ಯಾತಿ. ಅದನ್ನೂ ಮೀರಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿನೊಂದಿಗಿನ ಕೊಹ್ಲಿಯ ಸಂಬಂಧ. ವಿರಾಟ್ ಕೊಹ್ಲಿ ಕೊನೆಯವರೆಗೂ ಆರ್‌ಸಿಬಿ ಪರವೇ ಆಡಲು ನಿರ್ಧರಿಸಿದ್ದಾರೆ.