Top Newsಸುದ್ದಿ

ಸುಂದರಿ ಮೊನಾಲಿಸಾ ಕುಂಭಮೇಳದಿಂದ ಹೊರನಡೆದಿದ್ಯಾಕೆ?

ಪ್ರಯಾಗ್‌ರಾಜ್: ಇಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಸುಂದರ ಕಣ್ಣಿನ ಮೊನಾಲಿಸಾ ಎಂಬ ಹುಡುಗಿಯೊಬ್ಬಳು ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದ್ದಳು. ಆದರೆ ಸದ್ಯ ಇದೀಗ ಆಕೆ ಕುಂಭಮೇಳದಿಂದ ಹೊರನಡೆದಿದ್ದಾಳೆ.

ಮಹಾಕುಂಭಮೇಳದಲ್ಲಿ ದೇಶ- ವಿದೇಶದಿಂದ ಕೋಟ್ಯಂತರ ಜನರು ಬರುತ್ತಿದ್ದಾರೆ. ಜೊತೆಗೆ ಕುಂಭಮೇಳದಲ್ಲಿ ವಿಭಿನ್ನ ರೀತಿಯಲ್ಲಿ ಹಲವರು ಗುರುತಿಸಿಕೊಳ್ಳುತ್ತಿದ್ದಾರೆ. ಆ ಪೈಕಿ ರುದ್ರಾಕ್ಷಿ ಮಾರುವ ಹುಡುಗಿಯೊಬ್ಬಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಳು.

ಮೂಲತಃ ಇಂದೋರ್‌ನವಳಾದ ಈಕೆಯ ಹೆಸರು ಮೊನಾಲಿಸಾ ಭೋಸ್ಲೆ, ಮಹಾಕುಂಭಮೇಳದಲ್ಲಿ ರುದ್ರಾಕ್ಷಿ ಮಾರುತ್ತಿದ್ದಳು. ತನ್ನ ಸುಂದರ ಕಣ್ಣು, ನಗು ಹಾಗೂ ಮುಗ್ಧ ಸ್ವಭಾವವದಿಂದ ಎಲ್ಲರ ಹೃದಯ ಕದ್ದಿದ್ದಳು. ಇದರಿಂದ ರಾತ್ರೋರಾತ್ರಿ ಫೇಮಸ್ ಆಗಿ, ಸೋಷಿಯಲ್ ಮೀಡಿಯಾದಲ್ಲಿ ಆಕೆಯೊಂದಿಗಿನ ಸೆಲ್ಫಿ, ಅವಳ ವಿಡಿಯೋಗಳು ಹರಿದಾಡುತ್ತಿದ್ದವು.

ಇದೀಗ ನೆಟ್ಟಿಗರ ಹಾವಳಿಯಿಂದಾಗಿ ಅವರು ಕುಂಭಮೇಳ ತೊರೆದಿದ್ದಾರೆ. ಮಧ್ಯೆ ಪ್ರದೇಶ ಮೂಲದ ಮೊನಾಲಿಸಾ ರುದ್ರಾಕ್ಷಿ ಮಾಲೆ, ಮಣಿಸರಗಳ ಮಾರಾಟಕ್ಕೆಂದು ಕುಟುಂಬಸ್ಥರೊಂದಿಗೆ ಬಂದಿದ್ದರು. ಆದರೆ ರುದ್ರಾಕ್ಷಿ, ಮಾಲೆ ಖರೀದಿಸಲು ಬರುತ್ತಿದ್ದರೆಲ್ಲ ಆಕೆ ಜತೆಗೆ ಸೆಲ್ಫಿ, ಫೋಟೋಗೆ ಮುಗಿಬಿದ್ದು, ವ್ಯಾಪಾರಕ್ಕೂ ಅಡ್ಡಿ ಪಡಿಸಿದ್ದಾರೆ. ಹೀಗಾಗಿ ಆಕೆಯನ್ನು ಅವರ ತಂದೆ ಮನೆಗೆ ಕಳಿಸಿದ್ದಾರೆಂದು ಆಕೆಯ ತಂಗಿ ಹೇಳಿದ್ದಾರೆ.

Comments (0)

Your email address will not be published. Required fields are marked *

Back to top button