ನಿಮ್ಮ ಮಕ್ಕಳೇಕೆ ಇಷ್ಟು ಸೂಕ್ಷ್ಮ? ಕಾಲೇಜಿನಿಂದ ಹೊರ ಹಾಕಿದ್ದಕ್ಕೆ ಸೂಸೈಡ್.!

ಬೆಂಗಳೂರು : ಪೋಷಕರೇ ಹುಷಾರ್… ನಿಮ್ಮ ಮಕ್ಕಳನ್ನ ಕಾಲೇಜಿಗೆ ಕಳುಹಿಸ್ತೀರಾ ಆಗಾದ್ರೆ ಈ ಸುದ್ದಿ ಒಮ್ಮೆ ನೋಡಿ.ತನ್ನ ತಪ್ಪಿಲ್ಲದಿದ್ದರೂ ಕಾಲೇಜಿಂದ ಸಸ್ಪೆಂಡ್ ಮಾಡಿದ್ದಕ್ಕೆ ವಿದ್ಯಾರ್ಥಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಾಗರಬಾವಿಯ ವಿನಾಯಕ ಲೇಔಟ್ನಲ್ಲಿ ನಡೆದಿದೆ. ನಿಖಿಲ್ ಸುರೇಶ್ ಆತ್ಮಹತ್ಯೆ ಮಾಡಿಕೊಂಡ ಕಾಲೇಜು ವಿದ್ಯಾರ್ಥಿ. ಮೃತ ನಿಖಿಲ್ ಸುರೇಶ್ ಬನ್ನೇರುಘಟ್ಟದ ಎಎಮ್ಸಿ ಕಾಲೇಜಿನಲ್ಲಿ ಹೋಟೇಲ್ ಮ್ಯಾನೇಜ್ ಮೆಂಟ್ ಕೋರ್ಸ್ ಮಾಡುತ್ತಿದ್ದನು.

ಕಳೆದ 15 ದಿನಗಳ ಹಿಂದೆ ನಿಖಿಲ್ ವಿದ್ಯಾರ್ಥಿನಿಯೊಬ್ಬಳ ಜೊತೆ ಜಗಳ ಮಾಡಿಕೊಂಡಿದ್ದನಂತೆ. ತನ್ನ ತಪ್ಪಿಲ್ಲದಿದ್ದರೂ ಕಾಲೇಜು ಆಡಳಿತ ಮಂಡಳಿ ನಿಖಿಲ್ನನ್ನ ಸಸ್ಪೆಂಡ್ ಮಾಡಿದ್ದರು. ಇದರಿಂದ ನಿಖಿಲ್ ತಾಯಿಯೊಂದಿಗೆ ಮತ್ತೆ ಕಾಲೇಜಿಗೆ ಹೋಗಿ ಕ್ಷಮೆ ಕೇಳಿದ್ದನು. ಅಪಾಲಜಿ ಲೆಟರ್ ಬರೆದುಕೊಟ್ಟಿದ್ರು ಮತ್ತೆ ಕಾಲೇಜಿಗೆ ಬರಲು ಅವಕಾಶ ಕೊಟ್ಟಿರಲಿಲ್ಲವಂತೆ. ಅಷ್ಟೇ ಅಲ್ಲದೆ ಕಾಲೇಜು ಸಿಬ್ಬಂದಿ ಹಲ್ಲೆ ಮಾಡಿ ಬೈದು ಕಾಲೇಜಿನಿಂದ ಹೊರಹಾಕಿದ್ದಾಗಿ ಪೋಷಕರು ಆರೋಪಿಸಿದ್ದಾರೆ. ಈ ಸಂಬಂಧ ಬನ್ನೇರುಘಟ್ಟ ಪೊಲೀಸ್ ಠಾಣೆಗೆ ದೂರು ನೀಡಿದರೂ ಪೊಲೀಸರು ನಿರ್ಲಕ್ಷ ವಹಿಸಿದ್ದಾರೆ ಎಂದು ಆರೋಪಿಸಲಾಗಿದೆ.

15 ದಿನ ಬಿಟ್ಟು ಮತ್ತೆ ಬರೋದಾಗಿ ಪೊಲೀಸರು ಹೇಳಿದ್ದರು. ಆದ್ರೆ, ನಿಖಿಲ್ ಸುರೇಶ್ ನಿನ್ನೆ ರಾತ್ರಿ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ ̤ಬನ್ನೇರುಘಟ್ಟದ ಎಎಮ್ಸಿ ಕಾಲೇಜಿನಲ್ಲಿ ಮೊದಲ ವರ್ಷದ ಹೋಟೇಲ್ ಮ್ಯಾನೇಜ್ ಮೆಂಟ್ ಕೋರ್ಸ್ಗೆ ಒಂದೂವರೆ ಲಕ್ಷ ಫೀಸ್ ಕೊಟ್ಟು ವ್ಯಾಸಂಗ ಮಾಡುತ್ತಿದ್ದ ನಿಖಿಲ್. ಸದ್ಯ ನಿಖಿಲ್ ಸುರೇಶ್ ಪೋಷಕರು ಕಾಲೇಜಿನ ಮುಂಭಾಗ ಪ್ರತಿಭಟನೆ ಮಾಡಲು ನಿರ್ಧರಿಸಿದ್ದಾರೆ.




