ಕೃಪೆ: ಕಲರ್ಸ್ ಕನ್ನಡ
ಕನ್ನಡ ಬಿಗ್ ಬಾಸ್ ಸೀಸನ್ 12ನೇ ಆವೃತ್ತಿಗೆ, ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಬಂದ ಸ್ಪರ್ಧಿಯಲ್ಲೊಬ್ಬರಾದ ಸೂರಜ್ ಸಿಂಗ್ ಈಗ ಬಿಗ್ ಬಾಸ್ ಮನೆ ಮತ್ತು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದಾರೆ. ಮೈಸೂರಿನಲ್ಲಿ ಹುಟ್ಟಿ ಬೆಳೆದ ಈ ಯುವಕ, ಕಳೆದ ಕೆಲವು ವರ್ಷಗಳಿಂದ ಕೆನಡಾದಲ್ಲಿ settle ಆಗಿದ್ದವರು. ಅಲ್ಲಿ IT ಕ್ಷೇತ್ರದಲ್ಲಿ ಕೆಲಸ ಮಾಡಿಕೊಂಡಿದ್ದರು, ಜೊತೆಗೆ ಫಿಟ್ನೆಸ್ ಮತ್ತು ಮಾಡ್ಲಿಂಗ್ನಲ್ಲೂ ತೊಡಗಿಸಿಕೊಂಡಿದ್ದರು.

ಬಿಗ್ ಬಾಸ್‌ಗೆ ಎಂಟ್ರಿ ಕೊಡುವಾಗಲೇ ಸೂರಜ್ ಸಿಂಗ್ ಸ್ಟೈಲಿಶ್ ಲುಕ್, ಬೋಲ್ಡ್ ಬಾಡಿ ಲ್ಯಾಂಗ್ವೇಜ್ ಮತ್ತು ಫಿಟ್ ಫಿಜಿಕ್‌ನಿಂದ ಗಮನ ಸೆಳೆದಿದ್ದಾರೆ. ಎಂಟ್ರಿ ವೇಳೆ ಫುಲ್ swag ನಲ್ಲಿದ್ದ ಸೂರಜ್, ಫೀಮೇಲ್ ಫ್ಯಾನ್ಸ್‌ಗಳ ಎದೆಬಡಿತ ಹೆಚ್ಚಿಸಿದ್ರು ಅಂದ್ರೆ ತಪ್ಪಲ್ಲ! ಕೆಲವರಂತು “ಷರ್ಟ್ ಬಿಚ್ಚೋ ಸ್ಟೈಲ್ ನೊಡುಬೇಕು, ಇವರು ಬಿಗ್ ಬಾಸ್ ಮನೆಗೆ ಸೆಲೆಬ್ರಿಟಿ ವೆಬ್ ಕಟ್ ತರಹ ಎಂಟ್ರಿ ಕೊಟ್ಟರು!” ಎಂದು ಕಮೆಂಟ್ ಮಾಡಿದ್ದಾರೆ.

ಮೆಚ್ಚಿನ ಜಜ್ಜು ಸ್ಟೈಲ್, ಕಟ್‌ಫಿಟ್ ಬಾಡಿ ಮತ್ತು ಸ್ಪಷ್ಟ ಮಾತುಗಳ ಮೂಲಕ ಈಗಾಗಲೇ ಹೌಸ್‌ನೊಳಗಿನ ಕೆಲ ಸ್ಪರ್ಧಿಗಳೊಂದಿಗೆ bond ಕಟ್ಟಿಕೊಳ್ಳುವ ಪ್ರಯತ್ನದಲ್ಲಿ ಇದ್ದಾರೆ. ಸದ್ಯ, ಅವನು ಹೊಸ ಸ್ಪರ್ಧಿಯಾಗಿದ್ದರೂ, ಸಾಮಾಜಿಕ ಮಾಧ್ಯಮಗಳಲ್ಲಿ already ಒಂದು fanbase ಸೃಷ್ಟಿಯಾಗುತ್ತಿದೆ.

ಸೂರಜ್ ಸಿಂಗ್ ಬಿಗ್ ಬಾಸ್ ಮನೆಗೆ ಬಂದ ಮೇಲೆ ಮೊದಲ ದಿನದಿಂದಲೇ ಅವರು ಟಾಸ್ಕ್‌ಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾ, ತಾನೊಬ್ಬ ಸ್ಪರ್ಧಿಯಾಗಿ ಸಬೀತವಾಗುತ್ತಿದ್ದಾರೆ. ವಿಶಾಲವಾದ ಶಾರೀರಿಕ ಧಾರಣೆ, ಸ್ಪಷ್ಟವಾದ ಮಾತು, ಹಾಗೂ swag ನಡವಳಿಕೆಯಿಂದ ಇತರ ಸ್ಪರ್ಧಿಗಳ ಮೇಲೆ ಪ್ರಭಾವ ಬೀರುತ್ತಿದ್ದಾರೆ. ಸೂರಜ್ ಅವರ ಎಂಟ್ರಿಗೆ ಹೌಸ್‌ನ ಕೆಲವು ಮಹಿಳಾ ಸ್ಪರ್ಧಿಗಳು “ಅಯ್ಯೋ ಇವರು ಯಾರು!” ಅಂತೆ ರಿಯಾಕ್ಟ್ ಮಾಡಿದ ದೃಶ್ಯ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸೂರಜ್ ಸಿಂಗ್ ಬಗ್ಗೆ ಅವರು ನಿಂತಿದ್ರೆ – ಕ್ಯಾಮೆರಾ ಮುಂದೆ ಧೈರ್ಯವಂತ, ಸ್ಟೈಲಿಶ್… ಆದರೆ ಆ ವ್ಯಕ್ತಿತ್ವದ ಒಳಗಡೆ ಒಂದು grounded nature ಕೂಡಾ ಇದೆ. ಮನೆಯವರೊಂದಿಗೆ ಮಾತನಾಡುವ ಶೈಲಿ, ತಮ್ಮ ಪಾಸ್ಟ್ ಸ್ಟ್ರಗಲ್‌ಗಳನ್ನ openness ನಿಂದ ಹಂಚಿಕೊಳ್ಳುವಿಕೆ – ಈ ಎಲ್ಲವೂ ಅವರನ್ನು ಇತರ ಸ್ಪರ್ಧಿಗಳಿಗಿಂತ ವಿಭಿನ್ನ ವ್ಯಕ್ತಿಯಾಗಿ ಮಾಡುತ್ತಿದೆ.

ಕೆನಡಾದಲ್ಲಿ ಯಶಸ್ವಿ IT ಉದ್ಯೋಗ, ಆಮೇಲೆ ಬಿಗ್ ಬಾಸ್ ಕನಸು ಪೂರೈಸಲು ಭಾರತಕ್ಕೆ ವಾಪಸ್! ಇದು ಸೂರಜ್ ತೆಗೆದುಕೊಂಡ ದೈರ್ಯದ ನಿರ್ಧಾರ. ತಮ್ಮ ತಾಯಿಯೊಂದಿಗೆ ಹೆಚ್ಚು ಸಮಯ ಕಳೆಯಬೇಕೆಂಬ ಕಾರಣದಿಂದ ಅವರು ಕೆನಡಾ ತ್ಯಜಿಸಿ ಭಾರತಕ್ಕೆ ವಾಪಸ್ ಬಂದಿದ್ದಾರೆಂದು ಹೇಳಿಕೊಂಡಿದ್ದಾರೆ. ಈ ಹಿನ್ನೆಲೆ ಸಾಕಷ್ಟು ಜನರ ಹೃದಯ ಗೆದ್ದಿದೆ.

ಇನ್ನೂ ಕೆಲವೇ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಸೂರಜ್ ಸಿಂಗ್ ಹೆಸರು ಟ್ರೆಂಡ್ ಆಗ್ತಾ ಇರುವುದು ಆಶ್ಚರ್ಯವಲ್ಲ. ಫಿಟ್ನೆಸ್, ಸ್ಟೈಲ್, ಸ್ಕ್ರೀನ್ ಪ್ರಜೆನ್ಸ್ – ಎಲ್ಲದರ ಜೋಡಣೆಯಿಂದಾಗಿ ಅವರು ಈಗಾಗಲೇ BB ಫ್ಯಾನ್ಸ್ ಮನ ಗೆದ್ದಿದ್ದಾರೆ. “ಫುಲ್ ಪ್ಯಾಕೇಜ್ ಅನ್ನೋದು ಇದನ್ನೆ ಕಂಡ್ರಿ”.. ಇದು ನೆಟ್ಟಿಗರ ಅಭಿಪ್ರಾಯ.



