Top Newsಮನರಂಜನೆ

ಡ್ರಗ್ಸ್ ವಿವಾದದಲ್ಲಿ ಸಿಲುಕಿರುವ ಮಂಗ್ಲಿ ಯಾರು?

ಬಲು ಬೇಡಿಕೆಯ ಗಾಯಕಿಯರಲ್ಲಿ ಮಂಗ್ಲಿ ಫ್ರಂಟ್ ಲೈನಲ್ಲಿ ನಿಲ್ತಾರೆ. ಇತ್ತೀಚಿನ ದಿನಗಳಲ್ಲಿ ಮಂಗ್ಲಿ ಹಾಡುಗಳನ್ನು ಕೇಳದವರೇ ಇಲ್ಲ ಎನ್ನಬಹುದು.. ಅವರು ಎಲೆಕ್ಷನ್ ಪ್ರಚಾರದ ವೇಳೆ ಒಂದಿಷ್ಟು ವಿವಾದಕ್ಕೆ ಸಿಲುಕಿದ್ರು. ಇದೀಗ ಅವರ ಬರ್ತ್ ಡೇ ಪಾರ್ಟಿಯಲ್ಲಿ ಮಾದಕ ವಸ್ತು ಬಳಕೆ ಆರೋಪ ಬಂದಿದೆ.

ಮಂಗ್ಲಿಯ ಮೂಲ ಹೆಸರು ಸತ್ಯವತಿ. ಮಂಗ್ಲಿ ಜನಿಸಿದ್ದು ಕಡು ಬಡ ಕುಟುಂಬದಲ್ಲಿ. ಲಂಬಾಣಿ ಸಮುದಾಯದ ಮಂಗ್ಲಿ ಜನಿಸಿದ್ದು ಆಂಧ್ರದ ಬಸನೇಪಲ್ಲಿ ತಾಂಡಾದಲ್ಲಿ. ಮಂಗ್ಲಿಯ ಪೋಷಕರಿಗೆ ಮದುವೆಯಾದ 12 ವರ್ಷಕ್ಕೆ ಜನಿಸಿದ ಮಗು ಮಂಗ್ಲಿ.. ಮಂಗ್ಲಿಯ ಬಾಲ್ಯ ಬಹುತೇಕ ಕೂಲಿ ಮಾಡೋದ್ರಲ್ಲಿ ಒಡ ಹುಟ್ಟಿದವರ ಲಾಲನೆ ಪಾಲನೆಯಲ್ಲಿ ಕಳೆದುಹೋಯ್ತು. ಇದೆಲ್ಲದರ ಜೊತೆಗೆ ಶಿಕ್ಷಣವನ್ನೂ ಮಂಗ್ಲಿ ಮುಂದುವರೆಸಿದ್ರು

ಮಂಗ್ಲಿ ಬಾಲ್ಯದಲ್ಲಿಯೇ ಜನಪದ ಹಾಡನ್ನು ಚೆನ್ನಾಗಿ ಹಾಡುತ್ತಿದ್ರು. ಎನ್​ಜಿಓ ಒಂದರ ಸಿಬ್ಬಂದಿಗೆ ಮಂಗ್ಲಿಯ ಹಾಡು ಬಹಳ ಇಷ್ಟವಾಯ್ತು.ಮೌಢ್ಯತೆ ವಿರುದ್ಧ ಹಾಡುಗಳನ್ನು ಹಾಡಿಸಿದ್ರು.

ಮುಂದೆ ಕುಟುಂಬದಲ್ಲಿ ಕಷ್ಟವಿದ್ದ ಕಾರಣ ಬದುಕಿಗಾಗಿ ಹೈದರಾಬಾದ್ ಗೆ ತೆರಳಿದ್ರು. ಆರಂಭದಲ್ಲಿ ಮಕ್ಕಳಿಗೆ ಸಂಗೀತ ಹೇಳಿಕೊಟ್ಟು ಬಂದ ಅಲ್ಪ-ಸ್ವಲ್ಪ ದುಡ್ಡಿನಲ್ಲೇ ಟಿಸಿಎಚ್ ಮುಗಿಸಿ ಶಿಕ್ಷಕಿಯಾದ್ರು. ಆದರೆ ಹಾಡೋದನ್ನು ಬಿಡಲಿಲ್ಲ.

ಗಾಯಕ ಭಿಕ್ಷು ನಾಯಕ್ ತಂಡ ಸೇರಿ ಅವರೊಟ್ಟಿಗೆ ಕಾರ್ಯಕ್ರಮ ನೀಡ್ತಿದ್ರು. ಮುಂದೆ ಖಾಸಗಿ ವಾಹಿನಿ ಸೇರಿ ನಿರೂಪಕರಾದ್ರು. ಕಾರ್ಯಕ್ರಮಕ್ಕಾಗಿ ಮಂಗ್ಲಿಯಾದ್ರು.

ಅಂದ ಹಾಗೇ ಮಂಗ್ಲಿ ಎಂಬುದು ಅವರ ಅಜ್ಜಿ ಹೆಸರು. ಮುಂದೆ ಆಂಕರ್ ಆಗಿ ಮಂಗ್ಲಿ ಸಿಕ್ಕಾಪಟ್ಟೆ ಫೇಮಸ್ ಆದ್ರು. ತೆಲಂಗಾಣ ಭಾಷೆ ಮಂಗ್ಲಿ ಕೈಹಿಡಿಯಿತು. ಮುಂದೆ ಅವರು ತೆಲಂಗಾಣ ಪ್ರತ್ಯೇಕ ರಾಜ್ಯ ಹೋರಾಟದಲ್ಲೂ ಕಾಣಿಸಿಕೊಂಡ್ರು.

2018ರಲ್ಲಿ ತೆಲುಗಿನ ಶೈಲಜಾ ರೆಡ್ಡಿ ಅಲ್ಲುಡು ಸಿನಿಮಾದ ಟೈಟಲ್ ಹಾಡನ್ನು ಮೊದಲ ಬಾರಿಗೆ ಮಂಗ್ಲಿ ಹಾಡಿದರು. ಇದು ರಾತ್ರೋರಾತ್ರಿ ಅವರನ್ನು ಸ್ಟಾರ್ ಸಿಂಗರ್ ಆಗಿಸಿತು.

ಅಲಾ ವೈಕುಂಟಪುರಂಲೋ ಸಿನಿಮಾದ ರಾಮುಲೋ ರಾಮುಲ ಹಾಡು ಮಂಗ್ಲಿ ಅವರ ಹೆಸರನ್ನು ಮನೆ ಮಾತಾಗಿಸಿತು. ಲವ್ ಸ್ಟೋರಿ ಸಿನಿಮಾದ ಸಾರಂಗ ದರಿಯಾ ಎಲ್ಲರ ಗಮನ ಸೆಳೀತು.

ದರ್ಶನ್ ನಟನೆಯ ರಾಬರ್ಟ್ ಸಿನಿಮಾದ ಕನ್ನೆ ಅದಿರಿಂದಿ.. ಪುಷ್ಪ ಸಿನಿಮಾದ ಊ ಅಂಟಾವ, ಊಹು ಅಂಟಾವ, ವಿಕ್ರಾಂತ್ ರೋಣ ಸಿನಿಮಾದ ಎಕ್ಕ ಸಕ್ಕ.. ಹೀಗೆ ಒಂದರ ಹಿಂದೆ ಒಂದು ಬ್ಲಾಕ್ ಬಸ್ಟರ್ ಹಾಡುಗಳನ್ನು ಮಂಗ್ಲಿ ಹಾಡಿದ್ರು.

ಮಂಗ್ಲಿ ನೈಟ್ಸ್ ಎನ್ನುತ್ತಾ ಲೈವ್ ಶೋ, ಖಾಸಗಿ ಪಾರ್ಟಿಗಳಲ್ಲೂ ಮಂಗ್ಲಿ ಸದ್ದು ಮಾಡಿದ್ರು.

Comments (0)

Your email address will not be published. Required fields are marked *

Back to top button