Tuesday, June 24, 2025
26.6 C
Bengaluru
Google search engine
LIVE
ಮನೆರಾಜಕೀಯಯಾರಾಗ್ತಾರೆ ದೆಹಲಿ ಸಿಎಂ? ಪ್ರಮಾಣ ವಚನ ಸಮಾರಂಭಕ್ಕೆ ಮುಹೂರ್ತ ಫಿಕ್ಸ್..!

ಯಾರಾಗ್ತಾರೆ ದೆಹಲಿ ಸಿಎಂ? ಪ್ರಮಾಣ ವಚನ ಸಮಾರಂಭಕ್ಕೆ ಮುಹೂರ್ತ ಫಿಕ್ಸ್..!

ನಅದೆಹಲಿ:  ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿ ಬರೋಬ್ಬರಿ 10 ದಿನಗಳಾದರು ಸಹ ಇನ್ನೂ ಸಿಎಂ ಅಭ್ಯರ್ಥಿ ಫಿಕ್ಸ್ ಆಗಿಲ್ಲ. ನಾಳೆ ದೆಹಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದ್ದು, ಮಧ್ಯಾಹ್ನ 3.30ಕ್ಕೆ ನಡೆಯುವ ಸಭೆಯಲ್ಲಿ 48 ಬಿಜೆಪಿ ಶಾಸಕರು ಭಾಗಿಯಾಗಲಿದ್ದಾರೆ. ಈ ಸಭೆಯಲ್ಲೇ ದೆಹಲಿ ಸಿಎಂ ಆಯ್ಕೆ ಬಗ್ಗೆ ಮಹತ್ವದ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಈಗಾಗಲೇ ಮುಖ್ಯಮಂತ್ರಿ ಪ್ರಮಾಣ ವಚನ ದಿನಾಂಕ ನಿಗದಿಯಾಗಿದ್ದು, ಇದೇ ಫೆಬ್ರವರಿ 20ರಂದು ಬೆಳಗ್ಗೆ 11 ಗಂಟೆಗೆ ದೆಹಲಿ ನೂತನ ಸಿಎಂ ಪದಗ್ರಹಣ ನಡೆಯಲಿದೆ.

ಸಿಎಂ ರೇಸ್ ನಲ್ಲಿ ಯಾರೆಲ್ಲಾ?

ದೆಹಲಿ ಸಿಎಂ ರೇಸ್ ನಲ್ಲಿ ಪ್ರಮುಖವಾಗಿ ಮೂರು ಹೆಸರು ಕೇಳಿ ಬರ್ತಿವೆ. ಆಪ್ ಮುಖ್ಯಸ್ಥ, ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಮಣಿಸಿ ಜಯಭೇರಿ ಸಾಧಿಸಿದ ಪರ್ವೇಶ್ ವರ್ಮಾ, ಶಾಸಕಿ ರೇಖಾ ಗುಪ್ತಾ ಮತ್ತು ಮನೋಜ್ ತಿವಾರಿ ಸಿಎಂ ರೇಸ್ ನಲ್ಲಿದ್ದು ಅಂತಿಮವಾಗಿ ಬಿಜೆಪಿ ಹೈಕಮಾಂಡ್ ದೆಹಲಿ ಸಿಎಂ ಯಾರೇಂಬುದು ಇನ್ನಷ್ಟೇ ಘೋಷಿಸಬೇಕಿದೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments