ರಾಜಕೀಯ

ಯಾರಾಗ್ತಾರೆ ದೆಹಲಿ ಸಿಎಂ? ಇಂದು ಬಿಜೆಪಿ ಹೈವೋಲ್ಟೆಜ್ ಮೀಟಿಂಗ್..

ನವದೆಹಲಿ: ಬಿಜೆಪಿ ಪಕ್ಷದ ಶಾಸಕಾಂಗ ಸಭೆ ಇಂದು ಸಂಜೆ 7 ಗಂಟೆಗೆ ಪ್ರಾರಂಭವಾಗಲಿದೆ. ಈ ವೇಳೆ ನೂತನ ದೆಹಲಿ ಮುಖ್ಯಮಂತ್ರಿ ಆಯ್ಕೆ ಮಾಡಲಿದ್ದಾರೆ. ಈ ಸಂಬಂಧ ಹೊಸದಾಗಿ ಆಯ್ಕೆಯಾದ 48 ಶಾಸಕರನ್ನು ಸಂಜೆ 6 ಗಂಟೆಗೆ ದೆಹಲಿ ಪಂಡಿತ್ ಪಂತ್ ಮಾರ್ಗದಲ್ಲಿರುವ ದೆಹಲಿ ಬಿಜೆಪಿ ಕಚೇರಿಯಲ್ಲಿ ಸೇರಲು ತಿಳಿಸಲಾಗಿದೆ.

ಶಾಸಕಾಂಗ ಸಭೆ ಸಂಜೆ 6.30 ರಿಂದ 7ರ ವರೆಗೆ ನಡೆಯಲಿದೆ. ಈ ಸಭೆಗೆ ಹಿರಿಯ ಮುಖಂಡರು ವೀಕ್ಷಕರಾಗಿ ಬರಲಿದ್ದಾರೆ.  ಶಾಸಕರ ಅಭಿಪ್ರಾಯ ಪಡೆದ ಬಳಿಕ ದೆಹಲಿ ನೂತನ ಸಿಎಂ ಹೆಸರನ್ನು ಬಿಜೆಪಿ ಹೈ ಕಮಾಂಡ್ ನಾಯಕರು ಘೋಷಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ

Comments (0)

Your email address will not be published. Required fields are marked *

Back to top button