Freedom tv desk : ಟೀಮ್ ಇಂಡಿಯಾದಲ್ಲಿ ಮೂವರು ಆರಂಭಿಕ ಆಟಗಾರರಿದ್ದಾರೆ. ಈ ಮೂವರು ಕೂಡ ಈಗಾಗಲೇ ಟೆಸ್ಟ್ ಕ್ರಿಕೆಟ್​ನಲ್ಲಿ ಓಪನರ್​ಗಳಾಗಿ ಇನ್ಸಿಂಗ್ಸ್ ಆರಂಭಿಸಿದ್ದಾರೆ. ಇವರಲ್ಲಿ ಇಬ್ಬರನ್ನು ಆಯ್ಕೆ ಮಾಡಿರಬೇಕಾದ ಸವಾಲು ಇದೀಗ ಭಾರತ ತಂಡದ ಕೋಚ್ ರಾಹುಲ್ ದ್ರಾವಿಡ್ ಮುಂದಿದೆ.

ಭಾರತ – ಸೌತ್ ಆಫ್ರಿಕಾ – ಟೆಸ್ಟ್ ಸರಣಿಗೆ ವೇದಿಕೆ ಸಿದ್ಧವಾಗಿದೆ. ಸೆಂಚುರಿಯಲ್ಲಿನ ಸೂಪರ್ ಸ್ಪೋರ್ಟ್ ಪಾರ್ಕ್ ಮೈದಾನದಲ್ಲಿ ಇಂದಿನಿಂದ ಮೊದಲ ಟೆಸ್ಟ್ ಪಂದ್ಯ ಶುರುವಾಗಲಿದೆ. ಆದರೆಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿಯುವವರು ಯಾರು ಎಂಬುದೇ ಪ್ರಶ್ನೆ.

ಟೀಮ್ ಇಂಡಿಯಾದಲ್ಲಿ ಮೂವರು ಆರಂಭಿಕ ಆಟಗಾರರಿದ್ದಾರೆ. ಈ ಮೂವರುಕೂಡ ಈಗಾಗಲೇ ಟೆಸ್ಟ್ ಕ್ರಿಕೆಟ್​ನಲ್ಲಿ ಓಪನರ್​ಗಳಾಗಿ ಇನಿಂಗ್ಸ್ ಆರಂಭಿಸಿದ್ದಾರೆ. ಇವರಲ್ಲಿ ಇಬ್ಬರನ್ನು ಆಯ್ಕೆ ಮಾಡಿರಬೇಕಾದ ಸವಾಲು ಇದೀಗ ಭಾರತ ತಂಡದ ಕೋಚ್ ರಾಹುಲ್ ದ್ರಾವಿಡ್ ಮುಂದಿದೆ.

ಒಂದೆಡೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಆರಂಭಿಕನಾಗಿ ಖಚಿತ. ಆದರೆ ಮತ್ತೊಂದೆಡೆ ಎಡಗೈ ದಾಂಡಿಗ ಉಶಸ್ವಿ ಜೈಸ್ವಾಲ್ ಹಾಗೂ ಮಲಗೈ ಬ್ಯಾಟರ್ ಶುಭ್​ಮನ್ ಹಿಲ್ ನಡುವೆ ನೆರ ಪೈಪೋಟಿ ಇದೆ. ಇಲ್ಲಿ ಯಶಸ್ವಿ ಜೈಸ್ವಾಲ್ ಎಡಗೈ ಬ್ಯಾಟರ್ ಆಗಿರುವುದು ಪ್ಲಸ್ ಪಾಯಿಂಟ್.

ಇದೇ ಕಾರಣದಿಂದಾಗಿ ವೆಸ್ಟ್ ಇಂಡಿಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಜೈಸ್ವಾಲ್ ಅವರನ್ನು ಆರಂಭಿಕರಾಗಿ ಕಣಕ್ಕಿಳಿಸಲಾಗಿತ್ತು. ಇದೀಗ ಸೌತ್ ಆಫ್ರಿಕಾ ವಿರುಧ್ಧ ರೋಹಿತ್ ಶರ್ಮಾ ಜೊತೆ ಜೈಸ್ವಾಲ್ ಓಪನರ್​ ಆಗಿ ಕಣಕ್ಕಿಳಿದರೆ ಮೂರನೇ ಕ್ರಮಾಂಕದಲ್ಲಿ ಬದಲಾವಣೆ ಕಂಡುಬರಲಿದೆ.

ಈ ಹಿಂದೆ ವಿಂಡೀಸ್ ವಿರುದ್ಧದ ಸರಣಿಯಲ್ಲಿ ಯಶಸ್ವಿ ಜೈಸ್ವಾಲ್ ಆರಂಭಿಕರಾಗಿ ಕಣಕ್ಕಿಳಿದಿದ್ದ ಕಾರಣ ಶುಭಮನ್ ಗಿಲ್ ಅವರನ್ನು ಮೂರನೇ ಕ್ರಮಾಂಕದಲ್ಲಿ ಆಡಿಸಲಾಗಿತ್ತು. ಅಲ್ಲದೆ ವಿರಾಟ್ ಕೊಹ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದರು.

ಸೌತ್ ಆಫ್ರಿಕಾ ವಿರುದ್ಧ ಕೂಡ ಇದೇ ಕ್ರಮಾಂಕಗಳೊಂದಿಗೆ ಟಾಪ್-4 ಬ್ಯಾಟರ್ಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಅದರಂತೆ ಮೊದಲ ಟೆಸ್ಟ್ ಪಂದ್ಯಕದಕೆ ಟೀಮ್ ಇಂಡಿಯಾದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಹೀಗಿರಲಿದೆ.

By admin

Leave a Reply

Your email address will not be published. Required fields are marked *

Verified by MonsterInsights