ಬೆಂಗಳೂರು: RSS ನಿಷೇಧ ಮಾಡಿ ಅಂತ ನಾನು ಎಲ್ಲಿ ಹೇಳಿದ್ದೇನೆ ಸಾರ್ವಜನಿಕ ಸ್ಥಳಗಳಲ್ಲಿ ಬೇಡ ಅಂತ ಹೇಳಿದ್ದೇನೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ಧಾರೆ..
ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆರ್‌ಎಸ್‌ಎಸ್ ಬ್ಯಾನ್ ಮಾಡಬೇಕು ಅಂತ ನಾನೆಲ್ಲಿ ಹೇಳಿದ್ದೇನೆ? ಅಂತ ಪ್ರಶ್ನೆ ಮಾಡಿದ್ದಾರೆ. ಸಂಘ ರಿಜಿಸ್ಟರ್ ಆಗಿದ್ದರೆ ಕಾಪಿ ಕೊಡಲಿ ಅವರ ಕಚೇರಿ ಮೇಲೆ ರಾಷ್ಟ್ರಧ್ವಜ ಹಾರಿಸಲು 55 ವರ್ಷ ಬೇಕಾಯಿತು ಎಂದರಲ್ಲೇ ಮುನಿರತ್ನ ಗಣವೇಶ ಹಾಕಿಕೊಂಡು, ಗಾಂಧಿಜಿ ಫೋಟೋ ಹಿಡಿದುಕೊಂಡು ಪ್ರತಿಭಟಿಸಿದ್ದು ಹಸ್ಯಾಸ್ಪದ ಅವರಿಗೆ ಆರ್‌ಎಸ್‌ಎಸ್ ಇತಿಹಾಸ ಗೊತ್ತಿಲ್ಲ ಅನ್ನಿಸುತ್ತೆ ಎಂದು ವ್ಯಂಗ್ಯವಾಡಿದ್ದಾರೆ.
ಈ ಹಿಂದೆ ಆರ್ಎಸ್ಎಸ್ಅನ್ನು ನೆಹರು, ಇಂದಿರಾ ಗಾಂಧಿಯಿಂದಲೇ ಬ್ಯಾನ್ ಮಾಡಲಾಗಲಿಲ್ಲ ಎಂಬ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಸರ್ದಾರ್ ಪಟೇಲ್ RSS ಬ್ಯಾನ್ ಮಾಡಿದ್ದರು. ಇತಿಹಾಸದ ಪುಟವನ್ನು ತಿರುಗಿಸಿ RSS ಓದಲಿ. ಸಂಘದವರು ಬಂದು ಪಟೇಲರ ಕೈ ಕಾಲಿಗೆ ಬಿದ್ದಿದ್ರು. ನಾವು ಕೇಂದ್ರದ ನಿಯಮಗಳನ್ನು ಪಾಲಿಸುತ್ತೇವೆ. ನಮ್ಮ ನಿಯತ್ತು ರಾಷ್ಟ್ರ ಧ್ವಜಕ್ಕೆ ಇರುತ್ತದೆ. ಹೀಗಂತ ಆಗ ಕ್ಷಮೆ ಕೋರಿದ್ದರು. ಆಗ RSS ಬ್ಯಾನ್ ತೆರವು ಮಾಡಲಾಗಿತ್ತು. ಇದು ವಿಷಕಾರಿ ಎಂದು ನೆಹರು ಅವರಿಗೆ ಆಗ ಪಟೇಲರೇ ಪತ್ರ ಬರೆದಿದ್ದರು. ಬಿಜೆಪಿಯವರು ಈಗ ಪಟೇಲರ ಪ್ರತಿಮೆ ಕಟ್ಟಿದ್ದಾರೆ. ಅವರೇ ಹೇಳಿರೋದು ಇದು ವಿಷಕಾರಿ ಅಂತ. ಕೈಕಾಲಿಗೆ ಬಿದ್ದಾಗ ಪಟೇಲರು ಓಕೆ ಅಂದಿದ್ರು ಎಂದು ತಿರುಗೇಟು ನೀಡಿದರು.
ಆರ್ ಎಸ್ ಎಸ್ ನವರು ಹೇಡಿಗಳು. ಅವರ ಇತಿಹಾಸದ ಪುಟ ತೆಗೆದು ನೋಡಿ. ಸಾವರ್ಕರ್ ಬ್ರಿಟಿಷರಿಂದ ಪೆನ್ಶನ್ ತೆಗೆದುಕೊಳ್ತಿದ್ದರು. ಅವರು ದೇಶ ಭಕ್ತರಾರಾ?. ರಾಷ್ಟ್ರಧ್ವಜವನ್ನೇ ಅವರ ಕಚೇರಿ ಮೇಲೆ ಹಾಕಿರಲಿಲ್ಲ. ಇಂತವರು ಹೇಗೆ ದೇಶ ಭಕ್ತರಾಗ್ತಾರೆ. ಯಾವ ಸಂಘಟನೆ ರಾಷ್ಟ್ರದ ನಿಯಮ ಪಾಲಿಸಲ್ಲ. ರಿಜಿಸ್ಟ್ರೇಷನ್ ಕೂಡ ಮಾಡಿಸದಿದ್ದರೆ ದೇಶಭಕ್ತರಾ?. ಮೋಹನ್ ಭಾಗವತರಿಗೆ ಅಷ್ಟು ಸೆಕ್ಯೂರಿಟಿ ಯಾಕೆ?. ಗೃಹ ಸಚಿವರಿಗೆ ಇರುವಷ್ಟು ಭದ್ರತೆ ಅವರಿಗೆ ಯಾಕೆ?. ನಿಮ್ಮ ಮನೆಯಲ್ಲಿ ಆಚರಣೆ ಮಾಡಿ ಯಾರು ಬೇಡ ಅಂತಾರೆ?. ಜೋಶಿಯವರ ಮಕ್ಕಳು ಗಣವೇಷ ಹಾಕಲಿ. ಗಣವೇಶ ಹಾಕಿ ಆಚರಣೆ ಮಾಡಲಿ ಬೇಡ ಅನ್ನಲ್ಲ. ಅವರ ಮಕ್ಕಳಿಗೆ ಒಂದು ನಿಯಮ. ಬಡವರ ಮಕ್ಕಳಿಗೆ ಒಂದು ನಿಯಮ ಯಾಕೆ?. ಇಷ್ಟನ್ನೇ ನಾವು ಕೇಳ್ತಿರೋದು ಎಂದರು.


